Monday, April 29, 2024
spot_imgspot_img
spot_imgspot_img

ವಿಟ್ಲ(ಮಾ.5-ಮಾ.6): ಇರಂದೂರು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಮತ್ತು ಮಲರಾಯಿ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಇರಂದೂರು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಮತ್ತು ಮಲರಾಯಿ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವವು ಮಾ.5 ಶನಿವಾರ ದಿಂದ ಮಾ.6 ರವಿವಾರದವರೆಗೆ ಬ್ರಹ್ಮಶ್ರೀ ಕುಂಟುಕುಢೇಲುಗುರುರಾಜ್ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.

ಮಾ.5ರಂದು ಶನಿವಾರ ರಾತ್ರಿ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಶ್ರೀ ದಾಮ ಮಾಣಿಲ ಇವರು ಆಶೀರ್ವಚನ ನೀಡಲಿದ್ದಾರೆ.

vtv vitla
vtv vitla

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಶ್ರೀಕೃಷ್ಣನ ಬಲ್ಲಾಳ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಮಂತ್ರದೇವತಾ ಸನ್ನಿಧಿ ಕಟ್ಟೆಮಾರ್ ಇಲ್ಲಿನ ಧರ್ಮದರ್ಶಿ ಮನೋಜ್ ಕುಮಾರ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೆನ್ನಪ್ಪ ಗೌಡ, ವಿಟ್ಲ ಶ್ರಾವಣ ಜ್ಯುವೆಲ್ಲರ್ಸ್ ಮಾಲಕ ಸದಾಶಿವ ಆಚಾರ್ಯ ಕೈಂತಿಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಲತಾ ಅಶೋಕ್ ಪೂಜಾರಿ, ನಿವೃತ್ತ ಅಧ್ಯಾಪಕ ರಾಮನಗೌಡ ಮೊದಲಾದವರು ಭಾಗವಹಿಸಲಿದ್ದಾರೆ.

ಸಭಾಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಮಂಗಳೂರು ಇವರಿಂದ “ಪರಕೆ ಪೂರ್ವಕ್ಕೆ” ಎಂಬ ತುಳು ಹಾಸ್ಯಮಯ ನಾಟಕ ಜರಗಲಿರುವುದು.

ಕಾರ್ಯಕ್ರಮದಲ್ಲಿ ಭಗವದ್ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ನಾಗಬ್ರಹ್ಮ ಸೇವಾಟ್ರಸ್ಟ್ (ರಿ)ಇರಂದೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!