Thursday, April 18, 2024
spot_imgspot_img
spot_imgspot_img

ವಿಟ್ಲ: ಅಂತರಾಷ್ಟ್ರೀಯ ಸಂಸ್ಥೆ ಜೇಸಿಐ ವಿಟ್ಲ ಘಟಕಕ್ಕೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ಹಾಗೂ ಅತ್ಯುತ್ತಮ ಘಟಕಾಧ್ಯಕ್ಷ ರನ್ನರ್ ಪ್ರಶಸ್ತಿ!!

- Advertisement -G L Acharya panikkar
- Advertisement -
driving

ವಿಟ್ಲ: ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಭಾರತದ ವಲಯ 15ರ 41 ವರ್ಷಗಳ ಇತಿಹಾಸವುಳ್ಳ ಜೆಸಿಐ ವಿಟ್ಲ ಘಟಕ 2021ರ ಸಾಲಿನಲ್ಲಿ ಜೆ.ಎಫ್.ಡಿ ಚಂದ್ರಹಾಸ ಶೆಟ್ಟಿಯವರ ನೇತ್ರತ್ವದಲ್ಲಿ ಅತ್ಯುತ್ತಮ ಘಟಕವಾಗಿ ಹೊರಹೊಮ್ಮಿದೆ.

ಜೆಸಿಐ ವಿಟ್ಲ ಘಟಕವು ಈ ವರ್ಷದಲ್ಲಿ ಕರೋನಾದ ಸಂಕಷ್ಟದ ನಡುವೆಯೂ ಎಲ್ಲ ವಿಭಾಗದಲ್ಲಿ ಉತ್ತಮವಾಗಿ ನಿರ್ವಹಣೆ ತೋರಿದ್ದು,ಕಾರ್ಯಕ್ರಮ ವಿಭಾಗದಲ್ಲಿ ಕೋವಿಡ್ ಸುರಕ್ಷತೆಯ ಮಾಹಿತಿ ಕುರಿತ ಆರೋಗ್ಯ ಪ್ರೇರಣೆ,

ಇದನ್ನೂ ಓದಿ: ವಿಟ್ಲ: SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸೈಂಟ್ ರೀಟಾ ಶಾಲೆಯ ವಿದ್ಯಾರ್ಥಿನಿ ಅಲಿಶಾ ಫ್ಲೋರಿನ್ ವೇಗಸ್ ಲಯನ್ಸ್ ಕ್ಲಬ್ ನ ವತಿಯಿಂದ ಸನ್ಮಾನ

ರೈತ ಸ್ನೇಹಿ ಕಾರ್ಯಕ್ರಮದ ಅಡಿಯಲ್ಲಿ ರೈತರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಕ್ರಮ, ಯೋಗ ತರಬೇತಿಯ ಯೋಗಾಮೃತ ,ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಅಡಿಯಲ್ಲಿ ಹಲವಾರು ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿ ವಲಯ 15ರ ಕಾರ್ಯಕ್ರಮದ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುತ್ತದೆ.

ಸಾಮಾಜಿಕವಾಗಿ ವಿಟ್ಲ ಪರಿಸರದಲ್ಲಿ ರಕ್ತದಾನ ಶಿಬಿರ,ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ, ಮನೆ ನಿರ್ಮಾಣಕ್ಕೆ ಧನ ಸಹಾಯ, ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಯಂತಹ ಸಮಾಜಮುಖಿ ಕಾರ್ಯಗಳಿಂದ ನಾಗರಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

ಇದನ್ನೂ ಓದಿ: ವಿಟ್ಲ: ಲಾರಿ ಮತ್ತು ಆಕ್ಟೀವ್ ವಾಹನ ನಡುವೆ ಭೀಕರ ಅಪಘಾತ; ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಪರಿಸರ ದಿನಾಚರಣೆಯ ಅಂಗವಾಗಿ ಜೆಸಿ ಕುಟುಂಬ ಸದಸ್ಯರ ಮನೆಗಳಲ್ಲಿ 200ಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುತ್ತಾರೆ. ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆಯ ವಿಭಾಗದಲ್ಲಿ ಶಾಲಾ ಬಡವಿದ್ಯಾರ್ಥಿಗಳ ಕಲಿಕೆಗೆ ಆಶಾಕಿರಣವಾಗುವ ವಿದ್ಯಾರ್ಥಿವೇತನಕ್ಕೆ ವಲಯದಲ್ಲೇ ಅತೀ ಹೆಚ್ಚು ದೇಣಿಗೆಗಳನ್ನು ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.

ತರಬೇತಿ ವಿಭಾಗದಲ್ಲಿ ಜೆಸಿ ಹಾಗೂ ಜೆಸಿಯೇತರರಿಗೆ ಹಲವಾರು ವ್ಯಕ್ತಿತ್ವ ವಿಕಸನ ತರಬೇತಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಎಂಪವರಿಂಗ್ ತರಬೇತಿ, ಪ್ಯೂಚರ್ ತರಬೇತಿ, ಮಹಿಳಾ ದಿನಾಚರಣೆಯ ಸಪ್ತಾಹದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ,

ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ!

ಸ್ವರಕ್ಷಣಾ ತರಬೇತಿ, ಮಹಿಳೆಯರಿಗೆ ಸಬಲೀಕರಣ ತರಬೇತಿ, ಆರೋಗ್ಯ ತಪಾಸಣೆ ಶಿಬಿರ, ಉದ್ಯೋಗ ತರಬೇತಿ, ಸೀಮಂತ ಕಾರ್ಯಕ್ರಮ ಹಾಗೆಯೇ ವ್ಯವಹಾರ ವಿಭಾಗದಲ್ಲಿ ಬ್ಯುಸಿನೆಸ್ ಟ್ರಯೋ ತರಬೇತಿ,ಇ-ಮಾರ್ಕೆಟಿಂಗ್ ಸೇರಿದಂತೆ ಹಲವಾರು ತರಬೇತಿಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಅತ್ಯುತ್ತಮ ಘಟಕವಾಗಿ ಮೂಡಿಬಂದಿರುತ್ತದೆ.

ಘಟಕದ ಈ ಎಲ್ಲ ಕಾರ್ಯಕ್ರಮಗಳನ್ನು ಗುರುತಿಸಿ ಮಂಗಳೂರಿನಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ವಿಟ್ಲ ಘಟಕಕ್ಕೆ ”ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ’,ಅತ್ಯುತ್ತಮ ಘಟಕಾಧ್ಯಕ್ಷ ರನ್ನರ್ ಪ್ರಶಸ್ತಿ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ‘ಅರೈಸ್ ಘಟಕಾಧ್ಯಕ್ಷ ಪುರಸ್ಕಾರ್’, ಕಾರ್ಯಕ್ರಮ ವಿಭಾಗದಲ್ಲಿ ‘ವಲಯದ ಅಗ್ರಸ್ಥಾನ ಪ್ರಶಸ್ತಿ’

ಇದನ್ನೂ ಓದಿ: ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅಂಬೇಡ್ಕರ್ ಭವನ ಲೋಕಾರ್ಪಣೆ

ಹೀಗೆ ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಸಾಧನೆಯೊಂದಿಗೆ 12 ಕ್ಕೂ ಹೆಚ್ಚಿನ ಪ್ರಶಸ್ತಿಗಳು ಹಾಗೂ ಮನ್ನಣೆಗಳನ್ನು ವಲಯ 15ರ ವಲಯಾಧ್ಯಕ್ಷರಾದ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆಯವರು ವಿಟ್ಲ ಘಟಕಾಧ್ಯಕ್ಷರಾದ ಜೆ.ಎಫ್.ಡಿ ಚಂದ್ರಹಾಸ ಶೆಟ್ಟಿಯವರಿಗೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ವಲಯಾಧ್ಯಕ್ಷರು ಹಾಗೂ ಜಿ ಆ್ಯಂಡ್ ಡಿ ವಿಭಾಗದ ರಾಷ್ಟ್ರೀಯ ನಿರ್ದೇಶಕರಾದ ಜೆಸಿಐ.ಪಿ.ಪಿ.ಪಿ.ಕಾರ್ತೀಕೇಯ ಮಧ್ಯಸ್ಥರವರು, ವಲಯ ಉಪಾಧ್ಯಕ್ಷರು ಪ್ರಾಂತ್ಯ-ಜಿ ಹೇಮಲತಾ ಪ್ರದೀಪ್ ಹಾಗೂ ವಲಯದ ಉಪಾಧ್ಯಕ್ಷರುಗಳು,

ಇದನ್ನೂ ಓದಿ: ವಿಟ್ಲ: ಕೃಷಿಕ ಶ್ರೀ ಕೊರಗ ಪೂಜಾರಿ ಅಸ್ತಂಗತ

ವಲಯದ ನಿರ್ದೇಶಕರುಗಳು ಉಪಸ್ಥಿತರಿದ್ದರು. ವಿಟ್ಲ ಘಟಕಾಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ವಲಯಾಧಿಕಾರಿ ಜೈಕಿಶನ್,ಕಾರ್ಯದರ್ಶಿ ಪರಮೇಶ್ವರ ಹೆಗಡೆ,ಕೋಶಾಧಿಕಾರಿ ದೀಕ್ಷಿತ್, ಉಪಾಧ್ಯಕ್ಷ ಆರ್ಥಿಕ್,ನಿರ್ದೇಶಕ ಜೆಸಿ.ರಾಜೀವ್ ಶಿರೂರ್ ಹಾಗೂ ಸದಸ್ಯರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.

- Advertisement -

Related news

error: Content is protected !!