Sunday, August 9, 2026
spot_imgspot_img
spot_imgspot_img

ವಿಟ್ಲ: ಆರ್ ಕ್ಯೂಬ್ ಚೆಸ್ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಚೆಸ್ ತರಬೇತಿ ತರಗತಿ ಉದ್ಘಾಟನಾ ಸಮಾರಂಭ

- Advertisement -
- Advertisement -


ವಿಟ್ಲ: ಆರ್ ಕ್ಯೂಬ್ ಚೆಸ್ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಚೆಸ್ ತರಬೇತಿ ತರಗತಿಗಳ ಉದ್ಘಾಟನಾ ಸಮಾರಂಭವು ಶ್ರೀ ವಿದ್ಯಾ ಟ್ಯೂಷನ್ ಸೆಂಟರ್, ರಾಧಾಕೃಪಾ ಕಂಪೌಂಡ್ ಪ್ರಿಂಟ್ ಪಾಯಿಂಟ್ ಎದುರು ಗಡೆ, ಶಾಲಾ ರಸ್ತೆ ವಿಟ್ಲ ಇಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜನತಾ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ರವಿಕುಮಾರ್. ಆರ್.ಯಸ್, ಚೆಸ್ ಆಟದಿಂದ ನಾನಾ ರೀತಿಯ ಮಾನಸಿಕ ಸಾಮರ್ಥ್ಯಗಳಾದ ಶಿಸ್ತು, ತಾಳ್ಮೆ, ಸಹನೆ, ಆತ್ಮವಿಶ್ವಾಸ, ದೃಢತೆ, ನೆನಪಿನ ಶಕ್ತಿ, ತಾರ್ಕಿಕ ಆಲೋಚನೆ ಬೆಳವಣಿಗೆಯಾಗಲಿದೆ.

ಅಲ್ಲದೆ ಚಿಕ್ಕ ವಯಸ್ಸಿಗೇ ಪ್ರಾಥಮಿಕ ಶಾಲಾ ಹಂತದಲ್ಲಿ ಚೆಸ್ ಆಟಕ್ಕೆ ಪ್ರಾಶಸ್ತ್ಯ ಕೊಡುವುದು ಉತ್ತಮ.ಮಕ್ಕಳಿಗೆ ಏನನ್ನು ಯೋಚಿಸಬೇಕು ಎಂಬುದನ್ನು ಕಲಿಸುವ ಬದಲು ಹೇಗೆ ಯೋಚಿಸಬೇಕು ಎಂಬುದನ್ನು ಚೆಸ್ ಕಲಿಸುವುದರಿಂದ ತಿಳಿಸಬಹುದಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತುಗಳನ್ನಾಡಿದರು. ಶ್ರೀ ವಿದ್ಯಾ ಟ್ಯೂಷನ್ ಸೆಂಟರ್ ನ ಮುಖ್ಯಸ್ಥೆಯಾದ ಶ್ರೀಮತಿ . ಶ್ವೇತಾ ಕುಮಾರಿ. ಜಿ. ಉಪಸ್ಥಿತರಿದ್ದರು. ಮಾ| ವೇದಿಕ್. ಆರ್. ಪ್ರಾರ್ಥನೆ ಸಲ್ಲಿಸಿದರು.
ಆರ್ ಕ್ಯೂಬ್ ಚೆಸ್ ಅಕಾಡೆಮಿಯ ಉಪನ್ಯಾಸಕರಾದ ರವಿಪ್ರಸಾದ. ಬಿ. ಜಿ. ಸ್ವಾಗತಿಸಿ, ರೋಹಿತ್ ಕುಮಾರ್. ಟಿ. ವಂದನಾರ್ಪಣೆಗೈದರು.

ಚೆಸ್ ತರಬೇತಿ ಸೇರಲಿಚ್ಚಿಸುವರು ಮೊಬೈಲ್ ನಂಬರ್ 9880898297,9964498926 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!