Friday, May 17, 2024
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟು ಶಾಲೆಯಲ್ಲಿ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಂಬಳಬೆಟ್ಟು ಇಲ್ಲಿ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಾಲಾ ಹಿರಿಯ ವಿದ್ಯಾರ್ಥಿ ಬದ್ರಿಯಾ ಅಬ್ದುಲ್ ಅಝೀಝ್ ಸುಮಾರು 40,000/- ರೂ ಮೌಲ್ಯದ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ಒದಗಿಸಿದ್ದರು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್ ನಾಯಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಮಹಾಬಲೇಶ್ವರ ಭಟ್, ಸಿದ್ಧಿಕ್, ಮರಿಯಮ್ಮ ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮತ್ತು ಕಂಬಳಬೆಟ್ಟು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರವಿಪ್ರಸಾದ್ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಾರಿಜ ಬಿ.ಎ ಸ್ವಾಗತಿಸಿ, ಶಾಲಾ ಶಿಕ್ಷಕ ಶ್ರೀಪತಿ ನಾಯಕ್ ಕೃತಜ್ಞತೆ ಸಲ್ಲಿಸಿದ್ದರು. ಶಾಲಾ ಶಿಕ್ಷಕ ವಿ. ರಾಧಾಕೃಷ್ಣ ವರ್ಮ ಕಾರ್ಯಕ್ರಮ ನಿರೂಪಿಸಿದ್ದರು. ಶಾಲಾ ಶಿಕ್ಷಕಿಯರಾದ ಅಕ್ಷತಾ ಮತ್ತು ಪ್ರಿಯಾ ಸಹಕರಿಸಿದ್ದರು.

vtv vitla
- Advertisement -

Related news

error: Content is protected !!