- Advertisement -
- Advertisement -




ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಆಳಂದ ತಾಲೂಕಿನ ತಡೋಳ ಗ್ರಾಮದಲ್ಲಿ ನಡೆದಿದೆ.
ಪೂಜಾ ಪ್ರವೀಣ(30) ಆತ್ಮಹತ್ಯೆಗೆ ಶರಣಾದ ಮಹಿಳೆ.
ಬಸವಕಲ್ಯಾಣ ತಾಲೂಕಿನ ಮೂಲದ ಪೂಜಾ ಕಳೆದ 4 ವರ್ಷದ ಹಿಂದೆ ತಡೋಳ ಗ್ರಾಮದ ಪ್ರವೀಣ್ ಎಂಬವರೊಂದಿಗೆ ವಿವಾಹವಾಗಿದ್ದಳು.
ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನಾಗಿರುವ ಪ್ರವೀಣ್, ವರದಕ್ಷಿಣೆ ತರುವಂತೆ ಪೂಜಾಳನ್ನು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಈ ಹಿಂದೆಯೂ ಸಹ ಹಲವು ಬಾರಿ ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ.
ಇದೀಗ ವರದಕ್ಷಿಣೆ ಆಸೆಗಾಗಿ ಗಂಡನೇ ಪೂಜಾಳನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೂಜಾ ಮೃತದೇಹವನ್ನು ತಾಲ್ಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ಪತಿ ಪ್ರವೀಣ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ
- Advertisement -








