Saturday, August 1, 2026
spot_imgspot_img
spot_imgspot_img

ವಿಟ್ಲ ಕುಲಾಲ ಸಂಘ(ರಿ.) ಇದರ 23ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜೆ

- Advertisement -
- Advertisement -
vtv vitla
vtv vitla

ವಿಟ್ಲ: ಫಿರ್ಕಾದ ಕುಲಾಲಬಾಂಧವರ 23ನೇ ವರ್ಷದ ವಾರ್ಷಿಕೋತ್ಸವವು ಡಿ.26ನೇ ಆದಿತ್ಯವಾರ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಕುಲಾಲ ಸಂಘದ ಭವನದಲ್ಲಿ ನಡೆಯಿತು. ಪೂರ್ವಾಹ್ನ ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಸಭಾಕಾರ್ಯಕ್ರಮವು ಕುಲಾಲ ಸಂಘದ ಅಧ್ಯಕ್ಷ ಬಿ. ಕೆ. ಬಾಬುರವರ ಅಧ್ಯಕ್ಷತೆಯಲ್ಲಿ ನಡೆಯಿತು.ತುಳು ಕವಯಿತ್ರಿ, ಲೇಖಕಿ ಶ್ರೀಮತಿ ಕುಶಲಾಕ್ಷಿ.ವಿ. ಕುಲಾಲ್ ಕಣ್ವತೀರ್ಥ,ಅಥಿತಿಗಳಾಗಿ ಭಾಗವಹಿಸಿ “ಸಮುದಾಯದ ಉನ್ನತಿಗೆ ಯಾವುದೇ ಬಡತನ-ಶ್ರೀಮಂತಿಕೆ, ಭಾಷಾ ವಿಭಿನ್ನತೆಗಳು ಅಡ್ಡಿಯಾಗಬಾರದು. ತಮ್ಮ ತಮ್ಮ ಅಭಿರುಚಿಗಳು ವೈಯಕ್ತಿಕ ತೃಪ್ತಿ ಹಾಗೂ ಸಾಧನೆಗೆ ಪೂರಕವಾಗುತ್ತದೆ.

vtv vitla
vtv vitla

ಕರಾವಳಿಯಲ್ಲಿ ನಮ್ಮ ಮಾತೃಭಾಷೆ ತುಳು ಭಾಷಾ ಬೆಳವಣಿಗೆ ಆಗಬೇಕಿದೆ ಎಂದರು. ದ.ಕ ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರಕುಲಾಲ್ ರವರು ಪ್ರಸ್ತುತ ಸ್ಥಿತಿಗತಿಗೆ ಆರೋಗ್ಯ ಬಹಳ ಮುಖ್ಯವಾಗಿದೆ.ಇದನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಇದಕ್ಕಾಗಿ ಸರಕಾರದಿಂದ ನೀಡಲ್ಪಡುವ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

ಕಟ್ಟಡ ಸಮಿತಿಯ ಅಧ್ಯಕ್ಷ ಶ್ರೀ ರಮಾನಾಥ ವಿಟ್ಲ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕು. ಶ್ರೇಯಸ್ 2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ 623 ಅಂಕ ಪಡೆದು ದ. ಕ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದದಕ್ಕಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

8, 9 ಮತ್ತು 10 ನೇ ತರಗತಿಗಳಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆಯಾದ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಧನ ವಿತರಿಸಲಾಯಿತು. ಕುಲಾಲ ಬಂಧುಗಳಿಗೆ ನಡೆಸಿದ ಆಟೋಟ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹುತಾತ್ಮರಾದ ಯೋಧರ ಹಾಗೂ ಅಗಲಿದ ಸಮುದಾಯದ ಹಿರಿಯರಿಗೆ 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಅರುಣ್ ಕುಮಾರ್ ಪೆರುವಾಜೆ ಬಹುಮಾನ ವಿತರಣೆ ಹಾಗೂ ಸುರೇಶ್ ವಿಟ್ಲ ಮತ್ತು ನಾರಾಯಣ ಪುಣಚ ವಿದ್ಯಾರ್ಥಿ ಪ್ರೋತ್ಸಾಹಧನಗಳ ಪಟ್ಟಿಯನ್ನು ವಾಚಿಸಿದರು. ಬಳಿಕ ಅನ್ನಸಂತರ್ಪಣೆ ಮತ್ತು ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

vtv vitla

ಕಾರ್ಯಕ್ರಮದಲ್ಲಿ ಸಂಘದ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಮಾಡಲಾದ ಅದೃಷ್ಟ ಚೀಟಿಯ ಡ್ರಾ ಮಾಡಲಾಯಿತು.

ಫಲಿತಾಂಶವು ಬಂಪರ್ ಬಹುಮಾನ – 168
ಪ್ರಥಮ – 792, ದ್ವಿತೀಯ = 054, ತೃತೀಯ – 281, ಹಾಗೂ 5 ಆಕರ್ಷಕ ಬಹುಮಾನಗಳು 485, 2064, 690, 1080, 648 ಸಂಖ್ಯೆಗಳಾಗಿವೆ.

ಮಾನಸ ಪುಣಚ ಪ್ರಾರ್ಥಿಸಿ, ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರ ರಮಾನಾಥ ರವರು ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ವೀರಪ್ಪ ಮೂಲ್ಯ ಪುಣಚ ವಂದನಾರ್ಪಣೆ ಗೈದರು.

suvarna gold
- Advertisement -

Related news

error: Content is protected !!