

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನ ದಲ್ಲಿ ಫೆಬ್ರವರಿ 13 ರಂದು ವರ್ಷಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ. ಈ ಪ್ರಯುಕ್ತ ಇಂದು ಪುಂಡಿಕಾೈ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.

ಅನಂತಕೋಡಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಪುಂಡಿಕಾೈ ಮನೆಯಲ್ಲಿ ಗೊನೆ ಮುಹೂರ್ತ ನಡೆಯಿತು. ಪುಂಡಿಕಾೈ ಮನೆಯಿಂದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳು ಆಗಮಿಸಿದ ನಂತರ ಗೊನೆ ಮುಹೂರ್ತ ಪೂಜೆ ನಡೆಯಿತು.



ಜಾತ್ರೋತ್ಸವದ ತಯಾರಿ ಬಗ್ಗೆ ಯಾವುದೇ ಸಲಹೆ ಸೂಚನೆ, ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ವಿಷಯ ಪ್ರಸ್ತಾಪಿಸುವುದಾದರೆ ಗೊನೆ ಕಡಿಯುವುದರ ಮೊದಲಿಗೆ ಪ್ರಸ್ತಾಪೀಸಬೇಕು ಗೊನೆ ಮುಹೂರ್ತ ದ ಬಳಿಕ ಯಾರು ಯಾವುದೇ ವಿಚಾರ ಪ್ರಸ್ತಾಪಿಸುವಂತಿಲ್ಲ.
ಇಂತಹ ಆಚಾರ- ವಿಚಾರ ನಂಬಿಕೆ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಈ ಪದ್ಧತಿಯನ್ನು ಇಂದಿಗೂ ಅನುಸರಿಸಿಕೊಂಡು ಬಂದಿರುವುದು. ಈ ಇಲ್ಲಿನ ಗೊನೆಮುಹೂರ್ತ ಕಾರ್ಯಕ್ರಮದ ವಿಶೇಷ. ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ಮೊಕ್ತೇಸರರು, ಆಡಳಿತ ಮೊಕ್ತೇಸರರು ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.











