Thursday, July 23, 2026
spot_imgspot_img
spot_imgspot_img

ವಿಟ್ಲ: ಕೈಗಾರಿಕಾ ತರಬೇತಿ ಸಂಸ್ಥೆಗಳ 2022ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

- Advertisement -
- Advertisement -

ವಿಟ್ಲ : ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್ 2022ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗ ಯೋಜನೆಯಡಿಯ ಎರಡು ದೀರ್ಘಾವಧಿ ವೃತ್ತಿಗಳಾದ Mechanic Electric Vehicle ಮತ್ತು Industrial Robotics & Digital Manufactruing Technician ವೃತ್ತಿಗಳಿಗೆ ಮೇ.25 ರ 11.00 ಗಂಟೆಯಿಂದ, ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶ ಮಾಡಿಕೊಳ್ಳಲಾಗುವುದು.

ಕಂಪ್ಯೂಟರ್ ಆಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (C.O.P.A), ಎಲೆಕ್ಟ್ರೀಷಿಯನ್ (Electrician), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (Electronics Mechanic), ಫಿಟ್ಟರ್ (Fitter), ರೆಪ್ರಿಜರೇಷನ್ ಆಂಡ್ ಏರ್-ಕಂಡೀಷನೀಂಗ್ ಟೆಕ್ನಿಷಿಯನ್ (R&AC Technician). ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಜೂ. 6 ಆಗಿದ್ದು ಅಭ್ಯ ರ್ಥಿಗಳು ಮೂಲ ದಾಖಲೆ ಮತ್ತು 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಖುದ್ದಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಜೂ.7 ರಿಂದ ೮ರವರೆಗೆ Gradation List ಪ್ರಕಟಿಸಲಾಗುವುದು.

ಜೂ.9ರಿಂದ 13ರವರೆಗೆ ನೋಡಲ್ ಸಂಸ್ಥೆಗಳಲ್ಲಿ ಪ್ರವೇಶ ನಡೆಯಲಿರುವುದು. ಹೆಚ್ಚಿನ ವಿವರಗಳಿಗಾಗಿ ವಿಟ್ಲ ಸರ್ಕಾರಿ ಐಟಿ.ಐ ಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08255-200052/ 9845226485/ 9449242456 ರ ಮೂಲಕ ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!