Saturday, April 20, 2024
spot_imgspot_img
spot_imgspot_img

ವಿಟ್ಲ: ಜಾತ್ರಾ ನಿಮಿತ್ತ ದೇವಾಲಯ ತಲುಪಿದ ಹಸಿರುವಾಣಿ ಮೆರವಣಿಗೆ ಹಾಗೂ ಶ್ರೀ ಅರಸು ಮುಂಡಾಲತ್ತಾಯರ ದೈವದ ಭಂಡಾರ

- Advertisement -G L Acharya panikkar
- Advertisement -

ವಿಟ್ಲ: ಮಹತೋಭಾರ ವಿಟ್ಲ ಶ್ರೀ ಪಂಚಲಿ0ಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆ ಪ್ರಾರಂಭವಾಗಿದ್ದು, ಒಂಭತ್ತು ದಿನಗಳ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೊರಕಾಣಿಕೆ ಮೆರವಣಿಗೆ ಹಾಗೂ ಶ್ರೀ ಅರಸು ಮುಂಡಾಲತ್ತಾಯರ ದೈವದ ಭಂಡಾರವು ಕ್ಷೇತ್ರಕ್ಕೆ ಆಗಮನವಾಯಿತು.

ಜೈನ ಬಸದಿಯಿಂದ ವಿವಿಧ ಭಜನಾ ತಂಡಗಳೊ0ದಿಗೆ ಉಲ್ಪೆ ಮೆರವಣಿಗೆ ಹಾಗೂ ಹಸಿರುವಾಣಿ ಮೆರವಣಿಗೆಯು ಪಂಚಲಿ0ಗೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಶ್ರೀ ವಿಟ್ಲ ಪಂಚಲಿ0ಗೇಶ್ವರ ದೇವರ ಪ್ರಧಾನ ದೈವ ಶ್ರೀ ಅರಸು ಮುಂಡಾಲತ್ತಾಯರ ದೈವದ ಭಂಡಾರವು ದೇವಸ್ಯದಿಂದ ಶ್ರೀ ಪಂಚಲಿ೦ಗೇಶ್ವರ ಕ್ಷೇತ್ರಕ್ಕೆ ಆಗಮನವಾಯಿತು. ನಂತರ ಉತ್ಸವ ಬಲಿ, ಕಟ್ಟೆ ಪೂಜೆ, ಬಳಿಕ ಬಟ್ಟಲು ಕಾಣಿಕೆ ನಡೆಯಿತು.

ವಿಟ್ಲ ಸೀಮೆಯ ಮಹಾತೋಬಾರ ಶ್ರೀ ಪಂಚಲಿ0ಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ನಿಮಿತ್ತ ಭಂಡಾರ ಬಂದಿದ್ದು, ಶ್ರೀ ಅರಸು ಮುಂಡಾಲತ್ತಾಯರ ಸನ್ನಿಧಿ ದೇವಸ್ಯದಲ್ಲಿ ಗಣಹೋಮ, ತಂಬಿಲ ಸೇವೆ ತದನಂತರ, ದೈವದ ಭಂಡಾರವು ದೇವಸ್ಯ, ಮುಖ್ಯರಸ್ತೆ, ನಾಲ್ಕು ಮಾರ್ಗ, ನಂತರ ಆನೆ ಬಾಗಿಲಿನ ಮೂಲಕ ದೇವಾಲಯ ತಲುಪಿತು.

suvarna gold
- Advertisement -

Related news

error: Content is protected !!