Tuesday, April 30, 2024
spot_imgspot_img
spot_imgspot_img

ವಿಟ್ಲ: (ಡಿ.27- ಜ1) ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮವು ಡಿ.27 ರಿಂದ ಜ. 1 ರ ವರೆಗೆ ಪೂಜ್ಯ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಇವರ ಕೃಪಾಶೀರ್ವಾದದೊಂದಿಗೆ ಕುಂಟುಕುಡೇಲು ಬ್ರಹ್ಮಶ್ರೀ ವೇದಮೂರ್ತಿ ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಸುಜಿತ್ ಭಟ್ ಇವರ ಪೌರೋಹಿತ್ಯದಲ್ಲಿ ಜರಗಲಿದೆ.

ಡಿ. 27.ರಂದು ಸಂಜೆ ವೈದಿಕ ಕಾರ್ಯಕ್ರಮಗಳಾದ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತದೊಂದಿಗೆ ಉಗ್ರಾಣ ಮುಹೂರ್ತ,ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಖನನಾದಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಅಂಕುರಾರೋಹಣ ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ರಾತ್ರಿ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀಕ್ಷೇತ್ರ, ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ-ಮಾಣಿಲ,ಸಾಧ್ವಿ ಶ್ರೀ ಮಾತಾನಂದಮಯೀ ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀಕ್ಷೇತ್ರ, ಒಡಿಯೂರು, ಶ್ರೀಕೃಷ್ಣ ಗುರೂಜಿ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ, ಕುಕ್ಕಾಜೆ ಮಾಣಿಲ ಇವರು ಆಶೀರ್ವಚನ ನೀಡಲಿದ್ದಾರೆ. ನಾರಾಯಣ ಯಾನೆ ಬಟ್ಟುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷ್ಣಯ್ಯ ವಿಟ್ಲ ಅರಮನೆ ಗೌರವ ಉಪಸ್ಥಿತರಿರುವರು.

ಡಾ। ಗೀತ ಪ್ರಕಾಶ್ ವಿಟ್ಲ,ಶ್ರೀ ಕ್ಷೇತ್ರ ಖಂಡಿಗ ಮುಕ್ತೇಸರರು ರವೀಶ ಖಂಡಿಗ,ಜಯರಾಮ ರೈ ವಕೀಲರು, ಮೈಸೂರು ಎಸ್.ಎಲ್.ವಿ, ಬುಕ್ಸ್ ಪ್ರೈವೆಟ್ ಲಿ.ನ ದಿವಾಕರ ದಾಸ್‌ ನೇರ್ಲಾಜೆ, ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕುದ್ದುಪದವು ಪ್ರಥಮ್ ಪೆಟ್ರೋಲಿಯಂ ವ್ಯವಸ್ಥಾಪಕ ಮುಳಿಯಗುತ್ತು ಜಗದೀಶ್‌ ಶೆಟ್ಟಿ , ಬೆಂಗಳೂರು ವಿಜಯ ಬ್ಯಾಂಕ್‌ ನಿವೃತ್ತ ಸೀನಿಯರ್ ಬ್ರಾಂಚ್ ಮೆನೇಜರ್ ಲಕ್ಷ್ಮಣ ಶೆಟ್ಟಿ ಪಟ್ಲಗುತ್ತು, ಉದ್ಯಮಿ ಶ್ರೀಧರ್ ಶೆಟ್ಟಿ ಗುಬ್ಯ-ಮೇಗಿನಗುತ್ತು, ಶೆಲ್ಟರ್ ಎಸೋಸಿಯೇಟ್ಸ್‌ನ ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 6.00ರಿಂದ ಶ್ರೀ ಕಾಶೀ ಮಕ್ಕಳ ಭಜನಾ ತಂಡ ಕಾಶೀಮಠ, ಆರ್. ಕೆ. ಆರ್ಟ್ಸ್, ಚಿಣ್ಣರ ಬಳಗ, ವಿಟ್ಲ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಡಿ. 28ರಂದು ಬೆಳಿಗ್ಗೆ ಮಹಾಗಣಪತಿ ಹವನ, ಅಂಕುರ ಪೂಜೆ, ಬೆಳಗ್ಗಿನ ಪೂಜೆ, ಕ್ಷಾಳನಾದಿ ಸಪ್ತಶುದ್ಧಿ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಂಕುರ ಪೂಜೆ, ಅನುಜ್ಞಾ ಕಲಶ ಪೂರಣಿ, ಅಧಿವಾಸ ಹೋಮ, ಶಯ್ಯಾ ಮಂಟಪ ಸಂಸ್ಕಾರ, ಶಯ್ಯಾಮಂಡಲ ರಚನೆ ನಡೆಯಲಿದೆ.

ಡಿ. 29ರಂದು ಬೆಳಿಗ್ಗೆ ಮಹಾಗಣಪತಿ ಹವನ, ಅಂಕುರ ಪೂಜೆ, ಬೆಳಗ್ಗಿನ ಪೂಜೆ, ಅನುಜ್ಞಾ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶ, ಶಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರಿ ಕಲಶ ಪೂಜೆ, ವಿಧೇಶ್ವರ ಕಲಶ ಪೂರಣೆ, ನಿದ್ರಾ ಕಲಶ ಪೂರಣೆ, ಅಗ್ನಿ ಜನನ, ಬಿಂಬ ಶುದ್ಧಿ ಕಲಶ ಪೂರಣೆ, ಶ್ರೀ ಶಾಸ್ತಾರ ದೇವರಿಗೆ ಸಂಹಾರ ತತ್ವ ಕಲಶಾಭಿಷೇಕ, ಜೀವಕಲಶ ಪೂರಣೆ, ಜೀವೋದ್ವಾಸನ ಕ್ರಿಯೆ, ಜೀವ ಕಲಶವನ್ನು ಶಯ್ಯೆಯಲ್ಲಿಡುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಅಂಕುರ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ಪೂಜೆ, ಜಂಬ ಶುದ್ಧಿ ಕಲಶಾಭಿಷೇಕ, ಶಿರಸ್ತತ್ವ ಹೋಮ, ಶಾಂತಿ ಹೋಮ, ಧ್ಯಾನಭಿವಾಸ ಕ್ರಿಯೆ, ಭದ್ರಕ ಮಂಡಲ ಪೂಜೆ, ಅಧಿವಾಸ ಬಲಿ, ಶಯ್ಯೆಯಲ್ಲಿ ರಾತ್ರಿ ಪೂಜೆ, ಅಧಿವಾಸ ಹೋಮ, ಶಕ್ತಿ ಪೂಜೆ, ರತ್ನನ್ಯಾಸ, ಪೀಠಾಧಿವಾಸ, ಪ್ರಾಸಾದ ಅಧಿವಾಸ, ಬ್ರಹ್ಮಕಲಶ ಮಂಟಪ ಸಂಸ್ಕಾರ ಬ್ರಹ್ಮಕಲಶ ಮಂಡಲ ರಚನೆ ನಡೆಯಲಿದೆ.

ಡಿ. 30.ರಂದು ಪುನರ್ ಪ್ರತಿಷ್ಠಾ ಮಹೋತ್ಸವ, ಪೂರ್ವಾಹ್ನ ಗಂಟೆ 5.45ಕ್ಕೆ 48 ಗಂಟೆಗಳ ಅಖಂಡ ಭಜನಾ ಸಂಕೀರ್ತನೆ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭ, ದೀಪ ಪ್ರಜ್ವಲನೆಯನ್ನು ಕೀರ್ತನ ಕೆದಿಲಾಯ ವಿಠಲ ಮಂದಿರ, ವಿಟ್ಲ, ಶೀನಪ್ಪ ನಾಯ್ಕ ಮಂಗಲಪದವು, ಮಾಧವ ಬಂಗೇರ ನೆರವೇರಿಸಲಿದ್ದಾರೆ.

ಪೂರ್ವಾಹ್ನ ಗಂಟೆ 7.00 ರಿಂದ ಸ್ವಸ್ತಿ ಪೂಣ್ಯಾಹ ವಾಚನ,ಮಹಾಗಣಪತಿ ಹವನ,ಅಂಕುರ ಪೂಜೆ, ಶಯ್ಯಾಪೂಜೆ, ಬೆಳಿಗ್ಗೆ 10.15ರಿಂದ 11.00ರವರೆಗಿನ ಕುಂಭ ಲಗ್ನ ಸುಮುಹೂರ್ತದಲ್ಲಿ-ಶ್ರೀ ಅಯ್ಯಪ್ಪ ಸ್ವಾಮಿಯ ಪುನರ್ ಪ್ರತಿಷ್ಠೆ ಅಷ್ಟಮಂಗಲ ದರ್ಶನ, ಗೋದರ್ಶನ, ಜೀವ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಕುಂಭೇಶ ಕಲಶಾಜಷೇಕ, ಆವಾಹನಾದಿಗಳು, ನ್ಯಾಸಾದಿಗಳು, ಪ್ರತಿಷ್ಠಾ ಬಲಿ,ಪ್ರಸನ್ನ ಪೂಜೆ, ಮಹಾಮಂಗಳಾರತಿ, ನಿತ್ಯ ನೈಮಿತ್ತಿಕಾದಿಗಳ ಪ್ರಮಾಣೀಕರಣ, ತತ್ವಹೋಮ, ತತ್ವಕಲಶ ಪೂಜೆ, ಕುಂಬೇಶ ಕಲಶ ಪೂಜೆ, ಕರ್ಕರಿ, ಕಲಶ ಪೂಜೆ, ಅಗ್ನಿ ಜನನ ನಡೆಯಲಿದೆ.

ಅಪರಾಹ್ನ ಗಂಟೆ 5.00ರಿಂದ ಪರಿವಾರ ದೇವರಿಗೆ ಕಲಶ ಪೂರಣೆ, ದ್ರವ್ಯಕಲಶ ಪೂರಣೆ, ಬ್ರಹ್ಮಕಲಶ ಪೂರಣೆ,ಪರಿಕಲಶ ಪೂರಣೆ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಅಧಿವಾಸ ಬಲಿ, ಕಲಶಾಧಿವಾಸ, ರಾತ್ರಿ ಪೂಜೆ ನಡೆಯಲಿದೆ.

ಬೆಳಿಗ್ಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ಮುಕ್ತಾನಂದ ಸ್ವಾಮೀಜಿ ಓಂ ಶ್ರೀ ಶಕ್ತಿ ಗುರು ಮಠ, ರಾಘವೇಂದ್ರ ಮಠ, ಕಾರಿಂಜೆ, ಮೂಡಬಿದಿರೆ ಆಶೀರ್ವಚನ ನೀಡಲಿದ್ದಾರೆ.

ಬಂಗಾರು ಅರಸರು ವಿಟ್ಲ ಅರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಸುಮಾಧರ ದೇರಣ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ ಮೆನೇಜಿಂಗ್ ಡೈರೆಕ್ಟರ್ ಭವಾನಿ ಗ್ರೂಪ್ ಆಪ್ ಕಂಪೆನಿ ಮುಂಬೈ, ಸಂಜೀವ ಮಠಂದೂರು ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಶಾಸಕರು,ಬಂಟ್ವಾಳ, ಒ. ಶ್ಯಾಂ ಭಟ್ ಹಿರಿಯ ವಕೀಲರು, ಮೈಸೂರು ಆಡಳಿತ ಮೊಕ್ತೇಸರರು, ಶ್ರೀ ಜಲದುರ್ಗಾ ದೇವಸ್ಥಾನ, ಆನೆಕಲ್ಲು, ರಾಜೇಶ್ ರೈ ಕಲ್ಲಂಗಳಗುತ್ತು ಕೇಂದ್ರ ಸರಕಾರ ಜಾರಿ ನಿರ್ದೇಶನಾಲಯ ಹಿರಿಯ ವಕೀಲರು ಬೆಂಗಳೂರು, ಸೀತಾರಾಮ ರೈ ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ, ಸವಣೂರು,ಜಯರಾಂ ರೈ ಉಪಾಧ್ಯಕ್ಷರು, KMF ಮಂಗಳೂರು, ಸೇಸಪ್ಪ ಕೋಟ್ಯಾನ್‌ ಪಚ್ಚಿನಡ್ಕ (ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ವಿಜೇತರು) ಶುಭ ಬೀಡಿ, ಮಂಗಳೂರು, ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ಚೌಟ ಗ್ಯಾಸ್‌ ಪರಂಗಿಪೇಟೆ, ಸಂತೋಷ್ ಕುಮಾರ್ ರೈ ಬೊಳ್ಯಾರು ‌ಅಮರ್‌ದೀಪ್ ಗ್ರೂಪ್ಸ್‌ , ಸಹಜ್ ರೈ ಬಳ್ಳಜ್ಜ ಉದ್ಯಮಿ, ಪುತ್ತೂರು, ಮಾಧವ ಮಾವೆ ಮಾಜಿ ಸ್ಥಾಯೀ ಸಮಿತಿಯ ಅಧ್ಯಕ್ಷರು, ಬಂಟ್ವಾಳ ಭಾಗವಹಿಸಲಿದ್ದಾರೆ.

ಮಧ್ಯಾಹ್ನ- ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 1.30ರಿಂದ ಜಗದೀಶ್ ಆಚಾರ್ಯ ಪುತ್ತೂರು -ಇವರಿಂದ “ಭಕ್ತಿಗಾನ ಮಂಜರಿ” (ಭಾವಗೀತೆ,ಜಾನಪದ ಹಾಡುಗಳು) ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಧ್ಯಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಸಂಜೆ ಗಂಟೆ 5.30ರಿಂದ ದೀಪ ಪ್ರಜ್ವಲನೆ ಕೇಶವ ಭಟ್ ಶ್ರೀ ಕೃಷ್ಣ ಧನ್ವಂತರಿ ಮಂದಿರ, ವಿಟ್ಲ, ಅಧ್ಯಕ್ಷತೆ ಸತೀಶ್ ಕುಮಾರ್ ಆಳ್ವ ಉರಾ-ಬಾಳಿಕೆ ಉದ್ಯಮಿ ವಿಟ್ಲ, ಅತಿಥಿಗಳಾಗಿ ಮೋಹನ್ ಮೈರ ನ್ಯಾಯವಾದಿ, ಬಿ.ಸಿ.ರೋಡ್, ಡಾ| ಸ್ಮಿತಾ ಅರವಿಂದ್ ಬೆನಕ ಡೆಂಟಲ್ ಕ್ಲಿನಿಕ್ ವಿಟ್ಲ, ವಿ. ಅಚ್ಯುತ ಈಶ್ವರ & ಸನ್ಸ್‌ ವಿಟ್ಲ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 6.00ರಿಂದ ನೃತ್ಯೋಪಾಸನಾ ಕಲಾಕೇಂದ್ರ (ರಿ) ಪುತ್ತೂರು ಪ್ರಸ್ತುತಪಡಿಸುವ ನೃತ್ಯ ನಿರ್ದೇಶನ ವಿದುಷಿ ಶಾಲಿನಿ ಆತ್ಮಭೂಷಣರ “ನೃತ್ಯೋಹಂ” ನಡೆಯಲಿದೆ.

ಡಿ.31ರಂದು ಬ್ರಹ್ಮಕಲಶೋತ್ಸವ ಪೂರ್ವಾಹ್ನ ಗಂಟೆ 7.00ರಿಂದ ಮಹಾಗಣಪತಿ ಹವನ, ಬೆಳಗ್ಗಿನ ಪೂಜೆ, ದೇವರಿಗೆ ಪಂಚಾಮೃತಾಭಿಷೇಕ, ತತ್ವ ಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಪರಿಕಲಶ ಸಹಿತ ದ್ರವ್ಯ ಕಲಶಾಭಿಷೇಕ, ಪರಿವಾರ ದೇವರಿಗೆ ಕಲಶಾಭಿಷೇಕ, ನ್ಯಾಸಾದಿಗಳು, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಗಂಟೆ 5.00ರಿಂದ ರಂಗಪೂಜೆ, ದುರ್ಗಾಪೂಜೆ, ಉತ್ಸವಬಲಿ ನಡೆಯಲಿದೆ.ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ ಗಂಟೆ 5.30ರಿಂದ ನಡೆಯಲಿದ್ದು. ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು, ಶ್ರೀ ಶ್ರೀ ಕಮಲಾದೇವಿ ಆಸ್ರಣ್ಣರು ಅನುವಂಶಿಯಾ ಪ್ರಧಾನ ಆರ್ಚಕರು, ಕಟೀಲು, ಆಶೀರ್ವಚನ ನೀಡಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ನಳಿನ್ ಕುಮಾರ್ ಕಟೀಲು ಸಂಸದರು, ಮಂಗಳೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಜುನಾಥ ಭಂಡಾರಿ ವಿಧಾನ ಪರಿಷತ್‌ ಸದಸ್ಯರು, ಕರ್ನಾಟಕ ಸರಕಾರ, ರಮನಾಥ ರೈ ಮಾಜಿ ಸಚಿವರು, ಕರ್ನಾಟಕ ಸರಕಾರ, ಅಶೋಕ್ ಕುಮಾರ್ ರೈ ಕೋಡಿಂಬಾಡಿ ರೈ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ಭುಜಬಲಿ ಧರ್ಮಸ್ಥಳ ಉಗ್ರಾಣ ಮುಖ್ಯಸ್ಥರು, ಶ್ರೀ ಕ್ಷೇತ್ರ ಧರ್ಮಸ್ಥಳ, ಶಿವಕುಮಾರ್ ಮಹಾಪೌರರು, ಮೈಸೂರು ಮಹಾನಗರ ಪಾಲಿಕೆ, ಪ್ರತಾಪ್ ಸಿಂಹ ವರ್ಮ ಕೀರ್ತನ ಡೆವಲಪರ್‍ಸ್ ಪುತ್ತೂರು, ಶಕುಂತಳಾ ಶೆಟ್ಟಿ ಮಾಜಿ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ, ಸುರೇಶ್ ಕುಮಾರ್ ರೈ ಅಧ್ಯಕ್ಷರು, ಒಡಿಯೂರು ಶ್ರೀ ವಿವಿದೋದ್ದೇಶ ಸಹಕಾರಿ ನಿಯಮಿತ, ದಿವ್ಯಪ್ರಭಾ ಗೌಡ ಚಿಲ್ತಡ್ಕ, ಸುಬ್ರಾಯ ಪೈ ಉದ್ಯಮಿ, ವಿಟ್ಲ, ಡಾ| ವಿ. ಕೆ. ಹೆಗ್ಡೆ ಪುಷ್ಪಕ್ ಕ್ಲಿನಿಕ್, ವಿಟ್ಲ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗಂಟೆ 1.30ರಿಂದ “ಗೀತಾ ಸಾಹಿತ್ಯ ಸಂಭ್ರಮ” ವಿಠಲ ನಾಯಕ್‌ ಕಲ್ಲಡ್ಕ ಮತ್ತು ಬಳಗದವರಿಂದ, ಸಂಜೆ ಗಂಟೆ 400ರಿಂದ ಡಾ| ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು – ಇವರಿಂದ “ಸಾಂಸ್ಕೃತಿಕ ಸಂಭ್ರಮ, ನಡೆಯಲಿದೆ.

ತಾರೀಕು 01-01-2023ನೇ ಅದಿತ್ಯವಾರ ಪೂರ್ವಾಹ್ನ ಗಂಟೆ 7.00ರಿಂದ ಶ್ರೀ ಭೂತಬಲ, ದರ್ಶನಬಲ, ರಾಜಾಂಗಣ ಪ್ರಸಾದ, ಬೆಳಗ್ಗೆ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 5.00ರಿಂದ ಕಲಶ ಪೂರಣೆ, ಪೇಟೆ ಸವಾರಿ ಶುದ್ಧ ಕಲಶಾಭಿಷೇಕ, ರಾತ್ರಿ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!