Friday, April 26, 2024
spot_imgspot_img
spot_imgspot_img

ವಿಟ್ಲ: ತಾಲೂಕು, ಜಿಲ್ಲಾ ಮಟ್ಟದ ನಿರ್ಣಯಗಳನ್ನು ನಾವು ಒಪ್ಪಬೇಕು – ಕಾಂಗ್ರೆಸ್‌ ಸಭೆಯಲ್ಲಿ ಚರ್ಚೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರು..?

- Advertisement -G L Acharya panikkar
- Advertisement -

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದ ಕಾಂಗ್ರೆಸ್‌ ಕಛೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ವಿವಿಧ ವಿಷಯಗಳ ಪ್ರಸ್ತಾಪ ಮಾಡಲಾಯಿತು.

ಈ ವೇಳೆ ಕಾಂಗ್ರೆಸ್ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ. ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕಾರ್ಯಕರ್ತರ ಹಾಗೂ ನಾಯಕರ ನಡುವೆ ವಾಕ್ಸಮರ ನಡೆಯಿತು.

ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಮತದಾರರ ಪಟ್ಟಿಗೆ ಹೊಸ ಸೇರ್ಪಡೆ, ಪರಿಷ್ಕರಣೆಯ ಬಗ್ಗೆ ಗಮನಹರಿಸಬೇಕು. ಅಧಿಕಾರ ಇಲ್ಲದೆಯೂ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದೆ. ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದಿಟ್ಟು ಮುಂದಿನ ಚುನಾವಣೆಗೆ ತಯಾರು ನಡೆಸಬೇಕೆಂದು ಎಂಬ ನಿರ್ಣಯಕ್ಕೆ ಬಂದರು.

ಪಕ್ಷಕ್ಕೆ ಬರುವವರನ್ನು ಪ್ರೀತಿಯಿಂದ ಕರೆಯಬೇಕು
ಈ ಸಭೆಯಲ್ಲಿ ಕಾರ್ಯಕರ್ತರ ಹಾಗೂ ನಾಯಕರ ಮಧ್ಯೆ ತಕ್ಕ ಮಟ್ಟಿಗೆ ವಾಕ್ಸಮರ ನಡೆಯಿತು. ಕಾರ್ಯಕರ್ತರು ಬೇರೆ ಪಕ್ಷದಿಂದ ಕರೆತರುವ ವ್ಯವಸ್ಥೆ ನಮ್ಮಲ್ಲಿ ಇದೆಯಾ? ಬಿಜೆಪಿಯಲ್ಲಿ ಅಸಮಾಧಾನ ಇದ್ದವರನ್ನು ಸೇರ್ಪಡೆ ಮಾಡಲು ಅವಕಾಶ ಇದೆಯೇ ಎಂಬ ಪ್ರಶ್ನೆ ಬಹಳ ಗಂಭೀರವಾಗಿ ಬಂತು. ಕೋಡಿಂಬಾಡಿ ವಲಯದಿಂದ ಇದೇ ಪ್ರಶ್ನೆ ಬಂದ ಕಾರಣ ಅಸಮಾಧಾನದಲ್ಲಿ ಇರುವವರನ್ನು ಪಕ್ಷಕ್ಕೆ ಕರೆತರುವ ವ್ಯವಸ್ಥೆ ಇದೆಯಾ? ಬಿಜೆಪಿಯವರು ಕಾಂಗ್ರೆಸ್‌‌ನವರಲ್ಲಿ ಅಸಮಾಧಾನ ಇದ್ದರೆ ರಾಜ್ಯ ಮಟ್ಟದ ನಾಯಕರು ಮನೆಬಾಗಿಲಿಗೆ ಬರುತ್ತಾರೆ. ಆದರೆ ಬಿಜೆಪಿಯ ಅಸಮಾಧಾನದವರ ಮನೆಗೆ ನಾವ್ಯಾಕೆ ಹೋಗುವುದಿಲ್ಲ.? ಎಂಬಿತ್ಯಾದಿ ಪ್ರಶ್ನೆಗಳು ಬಂತು.

ಈ ವೇಳೆ ಉತ್ತರ ಕೊಟ್ಟ ನಾಯಕರು ಯಾರು ಬಂದರೂ ನಮಗೆ ಸಂತೋಷ. ಒಗ್ಗಟ್ಟಿಗೆ ಪೆಟ್ಟು ಬೀಳಬಾದರು. ನಾವು ವಿಭಜನೆ ಆಗಬಾರದು. ಬರುವವರನ್ನು ಪ್ರೀತಿಯಿಂದ ಕರೆಯಬೇಕು. ವ್ಯಕ್ತಿ ಹೇಗಿದ್ದಾನೆ ತಿಳಿದಿರಬೇಕು. ಬರುವುದಾದರೇ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಮನೆಗೆ ಹೋಗಿ ಪಕ್ಷಕ್ಕೆ ಕರೆಸಿಕೊಳ್ಳಲು ಸಿದ್ಧ. ಅದೇ ರೀತಿ ಕಾಂಗ್ರೆಸ್‌ಲ್ಲಿರುವ ಅಸಮಾಧಾನಿಗಳ ಮನವೊಲಿಕೆ ಸಲಹೆ ಸೂಚನೆಗಳು ಬಂತು. ಈ ವೇಳೆ ಮಾತನಾಡಿದ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಕೆ ಪಿ ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೂ ಪಕ್ಷ ಯಾರನ್ನು ಆರಿಸುತ್ತದೋ ಅವರ ಪರವಾಗಿ ದುಡಿಯಲು ಸಿದ್ಧ ಎಂದರು.

ವಲಯ ಮಟ್ಟಕ್ಕೆ ನಮ್ಮ ನಿರ್ಧಾರಗಳು ಸೀಮಿತವಾಗಿರುತ್ತದೆ. ಆದರೆ ರಾಜ್ಯ, ತಾಲೂಕು, ಜಿಲ್ಲಾ ಮಟ್ಟದ ನಿರ್ಣಯವನ್ನು ಒಪ್ಪಬೇಕು. ಅವರು ಹೇಳಿದ ಹಾಗೇ ನಡೆದುಕೊಂಡು ಹೋಗಬೇಕು ಎಂದು ನಾಯಕರು ಕಾರ್ಯಕರ್ತರಿಗೆ ಭರವಸೆ ತುಂಬಿದರು.

ಈ ವೇಳೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಕುರಿತು ಚರ್ಚೆ ನಡೆಯಿತು. ಅಶೋಕ್ ರೈ ಉನ್ನತ ಹೈಕಮಾಂಡ್ ಲೆವೆಲ್‌ನಲ್ಲಿ ಸೇರಿಸುವುದು ಒಳಿತು ಎಂಬ ಸಲಹೆ ಕೇಳಿಬಂದವು.

ಈ ವೇಳೆ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಕೆ ಪಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಶುಭಾಷ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮನಾಥ್, ಫಾರುಖ್ ಪೆರ್ನೆ ಸೇರಿದಂತೆ ಮೊದಲಾದವರು ಸೇರಿದ್ದರು.

ಇನ್ನು ನಾಯಕರ ಈ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು ಆವರಿಸಿದೆ. ಈ ಬಾರಿ ಬೇರೆ ಪಕ್ಷದಿಂದ ಬಂದವರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಎಂಬ ಪ್ರಶ್ನೆ ಮೂಡಿದೆ.

- Advertisement -

Related news

error: Content is protected !!