Sunday, May 5, 2024
spot_imgspot_img
spot_imgspot_img

ವಿಟ್ಲ: ತಿಂಗಳಿನಿಂದ ಮುಚ್ಚಿರುವ “ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ” ಎಟಿಎಂ ಕೇಂದ್ರ ; ಗ್ರಾಹಕರ ಪರದಾಟ

- Advertisement -G L Acharya panikkar
- Advertisement -
astr

ವಿಟ್ಲ: ವಿಟ್ಲ: ಹೆಸರಿಗೆ ರಾಷ್ಟ್ರೀಕೃತ ಎಟಿಎಂ ಸೆಂಟರ್ … ಆದ್ರೆ ಸರಕಾರದ ಕಚೇರಿಯ ಬಾಗಿಲು ಯಾವಾಗ್ಲೂ ಬಂದ್… ಗ್ರಾಹಕರು ದಿನಾಲೂ ಬಂದು ಹಣಕ್ಕಾಗಿ ಪರದಾಡುವುದೇ ಇಲ್ಲಿನ ಪರಿಸ್ಥಿತಿ… ಈ ಬಗ್ಗೆ ಹೇಳೊರಿಲ್ಲ, ಕೇಳೊರಿಲ್ಲ… ಸಮಸ್ಯೆ ಪರಿಹರಿಸುವವರು ಯಾರೂ ಇಲ್ಲದಂತಾಗಿದೆ. ಹಾಗಾದ್ರೆ ಎಲ್ಲಿದೆ ಸರಕಾರ.?

ವಿಟ್ಲದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರ ಕಳೆದ ಒಂದು ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡು ತನಗೇನು ಕೆಲಸವಿಲ್ಲದಂತೆ ಸುಮ್ಮನಾಗಿದೆ. ಸರಕಾರದಿಂದ ಮಾನ್ಯತೆ ಪಡೆದ ರಾಷ್ಟ್ರೀಕೃತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿಟ್ಲ ಶಾಖೆಯ ಮೂಲಕ ವ್ಯವಹಾರ ನಡೆಸುವವರು ಸಾವಿರಾರು ಜನ ಇದ್ದರೂ, ವಿಟ್ಲ ಕೆಎಸ್‌ಆರ್‌ಟಿಸಿ ರಸ್ತೆ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಎಟಿಎಂ ಕೇಂದ್ರ ಕಳೆದ ಒಂದು ತಿಂಗಳಿನಿಂದ ಮುಚ್ಚಿದ ಸ್ಥಿತಿಯಲ್ಲಿದೆ. ಗ್ರಾಹಕರು ದಿನಾಲೂ ಬಂದು ಪರದಾಡಿ ಖಾಲಿ ಕೈಯಲ್ಲಿ ತೆರಳುವಂತಾಗಿದೆ.

ಜನರಿಗೆ ಸೌಲಭ್ಯ ಒದಗಿಸುವ ವಿಟ್ಲದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರ ಬಂದ್ ಆಗಿದ್ದು, ಗ್ರಾಹಕರು ಪರದಾಡುವಂತಾಗಿದೆ. ತಿಂಗಳಿನಿಂದ ಮುಚ್ಚಿರುವ ಎಟಿಎಂ ಕೇಂದ್ರ ಇನ್ನೂ ತೆರೆದಿಲ್ಲ ಹೀಗಾಗಿ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ತೊಂದರೆಯಾಗಿದೆ. ಇದರಿಂದ ಅನಿವಾರ್ಯವಾಗಿ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಾಲು ಸಾಮಾನ್ಯ ಎಂಬಂತಾಗಿದೆ. ಹಣ ತುಂಬಲು ಮತ್ತು ಪಡೆಯಲು ಬ್ಯಾಂಕ್‌ಗಳಲ್ಲಿ ಗ್ರಾಹಕರು ಇಡೀ ದಿನ ಸಮಯ ಕಳೆಯಬೇಕಾದ ಅನಿವಾರ್ಯತೆಯೂ ಇದೆ.

ದಿನಾಲೂ ಬಾಗಿಲು ಮುಚ್ಚಿರಲು ಇರುವ ಸಮಸ್ಯೆಯಾದರೂ ಏನು? ಈ ಬಗ್ಗೆ ಹೇಳೋರು ಕೇಳೋರು ಯಾರು ಇಲ್ಲವೇ.? ಈ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು.. ಏನೇ ಸಮಸ್ಯೆ ಇದ್ದಲ್ಲಿ ಅತೀ ಶೀಫ್ರವೇ ಸರಿಪಡಿಸಿ ಗ್ರಾಹಕರ ವ್ಯವಹಾರಕ್ಕೆ ಸ್ಪಂದಿಸುವಂತೆ ಸಾರ್ವಜನಕರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!