Sunday, June 14, 2026
spot_imgspot_img
spot_imgspot_img

ತೌಕ್ತೆ ಪರಿಣಾಮ ನಿರಂತರ ಮಳೆ: ಮನೆಯ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

- Advertisement -
- Advertisement -

ಬೆಳಗಾವಿ: ‘ತೌಕ್ತೆ’ ಚಂಡಮಾರುತದ ಪರಿಣಾಮ ಶನಿವಾರ ತಡರಾತ್ರಿಯಿಂದ ಜೋರು ಗಾಳಿ ಹಾಗೂ ಮಳೆಯಿಂದ ಮನೆಯ ಗೋಡೆ ಕುಸಿದಿದ್ದರಿಂದ ಅದರಲ್ಲಿ ಸಿಲುಕಿ ಅಜ್ಜಿ- ಮೊಮ್ಮಗ ಸಾವಿಗೀಡಾದ ಘಟನೆ ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ದೊಡ್ಡವ್ವ ರುದ್ರಪ್ಪ ಪಟ್ಟೇದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೇದ (3) ಮೃತರು.

ದೊಡ್ಡವ್ವ ಅವರ ಪುತ್ರ ಸುರೇಶ ಹಾಗೂ ಸೊಸೆ ಮಂಜುಳಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

- Advertisement -

Related news

error: Content is protected !!