Wednesday, May 8, 2024
spot_imgspot_img
spot_imgspot_img

ವಿಟ್ಲ: ದಾರನ್ನಜಾತ್ತ್ ಎಜುಕೇಶನಲ್ ಸೆಂಟರ್ ನಲ್ಲಿ 75ನೇ ಸ್ವಾತಂತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ ಪಡ್ನೂರು ಗ್ರಾಮದ ಕೊಡುಂಗಾಯಿ ಸಮೀಪದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಇದರ ಸಭಾಂಗಣದಲ್ಲಿ 75 ನೇ ಸ್ವಾತಂತ್ರೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಅಸಯ್ಯದ್ ಶಮೀಮ್ ಅಲ್ ಬುಖಾರಿ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಸಂಸ್ಥೆಯ ಮ್ಯಾನೇಜರ್ ಹಾಜಿ ಹಮೀದ್ ಕೊಡಂಗಾಯಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭವ್ಯ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಈ ದೇಶಕ್ಕಾಗಿ ಪ್ರಾಣ ತೊರೆದು ಬ್ರಿಟಿಷರ ವಿರುದ್ಧ ಹೋರಾಡಿದ ಹುತಾತ್ಮರನ್ನು ಸ್ಮರಿಸುವುದು ಭಾರತೀಯರಾದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಡಾ.ಹಸೈನಾರ್, ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ, ಇಬ್ರಾಹಿಂ ಮೋನು, ಉಸ್ಮಾನ್ ಹಾಜಿ, ಇಸ್ಮಾಯಿಲ್, ಹಾಫಿಳ್ ಶರೀಫ್ ಮುಸ್ಲಿಯರ್, ಅಬ್ಬಾಸ್ ಟಿಪ್ಪು ನಗರ, ಅಶ್ರಫ್ ತವಕ್ಕಲ್ ಹಾಗೂ ಇನ್ನಿತರ ಊರಿನ ಮಹನೀಯರು ದರ್ಸ್ ವಿದ್ಯಾರ್ಥಿಗಳು, ಮದರಸ ವಿದ್ಯಾರ್ಥಿಗಳು ಪಾಲ್ಗೊಂಡು ಬಹಳ ಯಶಸ್ವಿಯಾಗಿ ಜರಗಿತ್ತು. ಸೇರಿದ ಗಣ್ಯರನ್ನು ಅಬ್ದುರಝಾಖ್ ಸಅದಿ ಕೊಡಿಪ್ಪಾಡಿ ಸ್ವಾಗತಿಸಿ ಹೊಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

- Advertisement -

Related news

error: Content is protected !!