Monday, May 6, 2024
spot_imgspot_img
spot_imgspot_img

ವಿಟ್ಲ: ನೆಕ್ಕರೆಕಾಡು ಬಳಿ ಮಾನವನ ತಲೆ ಬುರುಡೆ, ಎಲುಬುಗಳು ಪತ್ತೆ..!

- Advertisement -G L Acharya panikkar
- Advertisement -

ವಿಟ್ಲ: ತಲೆ ಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾದ ಘಟನೆ ವಿಟ್ಲ ನೆಕ್ಕರೆ ಕಾಡಿನಲ್ಲಿ ನಡೆದಿದೆ.

ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ತಲೆಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಂಜೆ ವೇಳೆ ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಈ ತಲೆ ಬುರುಡೆ, ಎಲುಬು ಬಟ್ಟೆಗಳು ಕಾಣ ಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಥಳದಲ್ಲಿ ವ್ಯಕ್ತಿಯ ಪಂಚೆ, ಶರ್ಟ್ ಪತ್ತೆಯಾಗಿದ್ದು, ತಲೆ ಬುರುಡೆ ಎಲುಬು ಯಾವ ವ್ಯಕ್ತಿಯದ್ದು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!