Friday, April 26, 2024
spot_imgspot_img
spot_imgspot_img

ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ಉಚಿತ ವ್ಯದ್ಯಕೀಯ ಶಿಬಿರ

- Advertisement -G L Acharya panikkar
- Advertisement -

ವಿಟ್ಲ: ಶಾರದಾ ಆಯುರ್ವೇದ ವ್ಯದ್ಯಕೀಯ ಕಾಲೇಜು & ಆಸ್ಪತ್ರೆ ದೇವಿನಗರ ತಲಪಾಡಿ, ಮಂಗಳೂರು ಮತ್ತು ಲಯನ್ಸ್ ಇಂಟರ್‌ನ್ಯಾಶನಲ್ ಲಯನ್ಸ್ ಕ್ಲಬ್ ಸಿಟಿ ವಿಟ್ಲ ಆಶ್ರಯದಲ್ಲಿ ಉಚಿತ ವ್ಯದ್ಯಕೀಯ ಶಿಬಿರ ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.

ಬಿ. ಸಂದೇಶ್ ಶೆಟ್ಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಬಂಗಾರು ಅರಸರು ವಿಟ್ಲ ಅರಮನೆ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಅನಿತಾ ಹೇಮನಾಥ ಶೆಟ್ಟಿ ಕಾವು ಮಾಜಿ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಯಿ ಸಮಿತಿ, ಸುದರ್ಶನ್ ಪಡಿಯಾರ್ ಪ್ರಾಂತೀಯ ಅಧ್ಯಕ್ಷರು ಲಯನ್ಸ್ ಜಿಲ್ಲೆ 317 ಡಿ, ಶ್ರೀಮತಿ ಸಂಗೀತ ಜಗದೀಶ್ ಪಾಣೆಮಜಲು ಸದಸ್ಯರು ಪಟ್ಟಣ ಪಂಚಾಯತ್, ಹೇಮಲತಾ ಜಗನ್ನಾಥ್ ಸಾಲ್ಯಾನ್ ಗೌರವ ಅಧ್ಯಕ್ಷರು ಮಹಿಳಾ ಮಂಡಳಿ, ಸತೀಶ್ ಕುಮಾರ್ ಆಳ್ವ ಮಾಲಕರು ಗಣೇಶ್ ಮೆಡಿಕಲ್, ಡಾ. ಸಂದೀಪ್ ಭಂಡಾರಿ ಶಾರದಾ ಕಾಲೇಜು , ಸ್ವಪ್ನ ಭಂಡಾರಿ ಶಾರದಾ ಕಾಲೇಜು, ಕೋಶಾಧಿಕಾರಿ ಒಎ ಕೃಷ್ಣ, ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ವಿ ಆರ್ ಸದಾಶಿವ, ಮೋಹನ್ ಕಟ್ಟೆ, ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ಸಂಬಂಧಿ ತೊಂದರೆಗಳಾದ ಮೂಳೆರೋಗ, ಫಿಸ್ಟುಲಾ, ಕಾರ್ನ್, ವೆರಿಕೋಸ್ ವೈನ್, ವೆರಿಕೋಸ್ ಅಲ್ಸರ್, ಮೂಗಿನ ಎಲರ್ಜಿ, ಮೂಗಿನ ಇತರ ತೊಂದರೆಗಳು, ತಲೆನೋವು, ಸ್ತೀರೋಗ ಸಂಬಂಧಿ ತೊಂದರೆಗಳು, ಸಾಮಾನ್ಯ ತೊಂದರೆಗಳ ತಪಾಸಣೆ ನಡೆಯಿತು. ನುರಿತ ವ್ಯದ್ಯರ ಸಲಹೆ, ತಪಾಸಣೆ, ಚಿಕಿತ್ಸೆಗಳಿಗೆ ನೂರಾರು ಜನ ಸ್ಪಂದಿಸಿ ಶಿಬಿರವನ್ನು ಯಶಸ್ವಿಗೊಳಿಸಿ, ಸದುಪಯೋಗ ಪಡೆದುಕೊಂಡರು.

- Advertisement -

Related news

error: Content is protected !!