Monday, May 6, 2024
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆ; ವಾರ್ಡ್ ನಂ.14 ರಿಂದ ಪಕ್ಷೇತರ ಅಭ್ಯರ್ಥಿ ಮೋಹನ್ ಸೇರಾಜೆ ಕಣಕ್ಕೆ!

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯು ಡಿ. 27 ರಂದು ನಿಗದಿಯಾಗಿದೆ. ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.

ವಾರ್ಡ್ ನಂ. 14ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ ಸೇರಾಜೆ ಕಣಕ್ಕಿಳಿದಿದ್ದಾರೆ. ಇವರು ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿಯಾಗಿದ್ದು, ವಿಟ್ಲ ಗ್ರಾಮ ಪಂಚಾಯಿತಿ ಸದಸ್ಯನಾಗಿ 5 ವರ್ಷ ಕಾರ್ಯನಿರ್ವಹಿಸಿದ್ದಾರೆ. ವಿಟ್ಲ ಮಾದರಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷನಾಗಿ, ಯಕ್ಷಮಿತ್ರರು ಇದರ ಅಧ್ಯಕ್ಷರಾಗಿ ಯಕ್ಷ ಕೂಟಗಳ ಸಂಘಟನೆ ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿವಿಧ ಜವಾಬ್ದಾರಿಗಳ ನಿರ್ವಹಣೆ ಅಧಿಕಾರ ಇಲ್ಲದ ಸಮಯದಲ್ಲಿ ಸರಕಾರದಿಂದ ದೊರೆಯವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ದೊರಕಿಸುವಲ್ಲಿ ತನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ.

vtv vitla
vtv vitla

ಪಕ್ಷೇತರ ಅಭ್ಯರ್ಥಿ ಮೋಹನ್ ಸೇರಾಜೆ ರವರ ಪ್ರಣಾಳಿಕೆಯ ಮುಖ್ಯಾಂಶಗಳು:

  1. ರಾಜ್ಯ ಕೇಂದ್ರ ಸರಕಾರದ ಕೋಟ್ಯಾಂತರ ರೂಪಾಯಿ ಅನುದಾನ ವಿಟ್ಲ ಪಟ್ಟಣ ಪಂಚಾಯತಿಗೆ ಬರುತ್ತದೆ. ಸರಿಯಾದ ಹಂಚಿಕೆ ಮತ್ತು ಕಟ್ಟು ನಿಟ್ಟಾದ ಅನುಷ್ಠಾನಕ್ಕೆ ಆದ್ಯತೆ ಕೊಟ್ಟು 14 ನೇ ವಾರ್ಡಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸುತ್ತದೆ.
  2. ಅನಿಲಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೊಳಿಸಿ, ಸ್ವಚ್ಛ, ಸುಂದರ ಪರಿಸರ ಮತ್ತು ಆಕರ್ಷಕ
    ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಿ, ಶಾಲೆಯನ್ನು ಅಭಿವೃದ್ಧಿಪಡಿಸುತ್ತದೆ.
  3. 14 ನೇ ವಾರ್ಡಿನ ಹಳೆಯ ಅಂಗನವಾಡಿಗಳನ್ನು ದುರಸ್ತಿಗೊಳಿಸಿ ಹೊಸ ಅಂಗನವಾಡಿಗಳನ್ನು ನಿರ್ಮಿಸಿ ಮಕ್ಕಳಿಗೆ
    ಮತ್ತು ಮಹಿಳೆಯರಿಗೆ ಸರಕಾರದ ಸೌಲಭ್ಯಗಳು ದೊರಕುವಂತೆ ಮಾಡುತ್ತೇನೆ.
  4. 14 ನೇ ವಾರ್ಡಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನು ಸುಧಾರಿಸುತ್ತೇನೆ.
  5. 14 ನೇ ವಾರ್ಡಿನ ಪ್ರತಿಯೊಬ್ಬರಿಗೆ ಸರಕಾರದ ವಿವಿಧ ಸೌಲಭ್ಯಗಳು ಸಿಗುವಂತೆ ಪ್ರಯತ್ನಿಸುತ್ತೇನೆ.
  6. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” – ಇದು ನನ್ನ ಯೋಜನೆ.
  7. ಸರಕಾರಿ ವ್ಯವಸ್ಥೆಗಳಲ್ಲಿ ಭ್ರಷ್ಟಚಾರನಿಲ್ಲದೆ ಪ್ರಗತಿಯಾಗದು ಲಂಚಕೋರರಿಗೆ ಸಾರ್ವಜನಿಕ ನೆರವಿನೊಂದಿಗೆ ಬಿಸಿ ಮುಟ್ಟಿಸುತ್ತೇನೆ.
vtv vitla
vtv vitla

ಆದುದರಿಂದ 14 ನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು “ಅನಾನಸ್” ಚಿಹ್ನೆಗೆ ನೀಡಿ ಬಹುಮತದಿಂದ ಗೆಲ್ಲಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!