- Advertisement -
- Advertisement -

ವಿಟ್ಲ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನೆಗೆ ಬಂಟ್ವಾಳ ತಹಶೀಲ್ದಾರರ ನಿಯೋಗ ಭೇಟಿ ನೀಡಿ ಸನ್ಮಾನಿಸಿದರು.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ತಮ್ಮ ಸಿಬ್ಬಂದಿಗಳ ಜತೆ ಭೇಟಿ ನೀಡಿದ್ದು, ಮಹಾಲಿಂಗ ನಾಯ್ಕ ಅವರು ಕೊರೆದ ಸುರಂಗ ಮತ್ತು ತೋಟಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಹಾಲಿಂಗ ನಾಯ್ಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭ ಉಪತಹಶೀಲ್ದಾರ್ ದಿವಾಕರ ಮುಗುಳ್ಯ ನವೀನ್ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕ ವಿನುತಾ, ಗ್ರಾಮ ಸಹಾಯಕ ಗಣೇಶ, ತಾಲೂಕು ಕಚೇರಿಯ ಸುಂದರ, ಶಿವಪ್ರಸಾದ್, ಮಹಮ್ಮದ್ ಆಸೀಪ್ ಭಾಗವಹಿಸಿದ್ದರು.


- Advertisement -








