Sunday, June 21, 2026
spot_imgspot_img
spot_imgspot_img

ಮಂಗಳೂರು: ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಕಿಡಿಗೇಡಿಗಳಿಂದ ಮತ್ತೊಂದು ಗೋಡೆ ಬರಹ!

- Advertisement -
- Advertisement -

ಮಂಗಳೂರು: ನಗರದ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಮತ್ತೊಂದು ಗೋಡೆ ಬರಹ ಪತ್ತೆಯಾಗಿದೆ. ಲಾಕ್ ಡೌನ್ ನೀಡೆಡ್ ಎಂದು ಇಂಗ್ಲಿಷಿನಲ್ಲಿ ಬರೆಯಲಾಗಿದ್ದು, ಅದರ ಬಳಿಯೇ ಬ್ಯಾಡ್ ಬಾಯ್ಸ್ ಇನ್ ದ ಸಿಟಿ ಎಂದು ಬರೆದಿದ್ದಾರೆ. ಅದರ ಮೇಲಭಾಗದಲ್ಲಿ ಟೆಲ್ ಯುವರ್ ಮಾಮ್ ಬಾಸ್ಟರ್ಡ್ ಎಂದು ಮತ್ತೊಂದು ವಾಕ್ಯ ಬರೆಯಲಾಗಿದೆ.

ಯಾರೋ ಕಿಡಿಗೇಡಿಗಳು ಇದನ್ನು ಬರೆದಿದ್ದಾರೆ ಎನ್ನಲಾಗುತ್ತಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಆಗಬೇಕು ಎಂದು ಬರೆದಿರುವ ಸಾಧ್ಯತೆಯಿದೆ. ಆದರೆ, ಅದರ ಬಳಿ ಮತ್ತೆರಡು ವಾಕ್ಯಗಳನ್ನು ಬೇರೆ ಯಾರೋ ಬರೆದಿರುವಂತಿದೆ. ಬ್ಯಾಡ್ ಬಾಯ್ಸ್ ಇನ್ ದಿ ಸಿಟಿ ಎಂದು ಬರೆದು ಬಾಣದ ಗುರುತನ್ನು ಹಾಕಿದ್ದು, ಲಾಕ್ ಡೌನ್ ನೀಡೆಡ್ ಎಂದಿರುವುದನ್ನು ತೋರಿಸುತ್ತದೆ.

ಆದರೆ, ಮೇಲ್ಭಾಗದಲ್ಲಿ ಟೆಲ್ ಯುವರ್ ಮಾಮ್ ಬಾಸ್ಟರ್ಡ್ ಎಂದು ಬೇರೆ ಯಾರೋ ಯುವಕರು ಬರೆದಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ಈ ಬಗ್ಗೆ ನಗರ ಡಿಸಿಪಿ ಹರಿರಾಮ್ ಶಂಕರ್, ಈ ರೀತಿಯ ಕೃತ್ಯ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ, ನಾವು ತನಿಖೆ ಕೈಗೊಳ್ಳುತ್ತೇವೆ ಎಂದಿದ್ದಾರೆ.

- Advertisement -

Related news

error: Content is protected !!