Sunday, June 21, 2026
spot_imgspot_img
spot_imgspot_img

ವಿಟ್ಲ: ಪುಗರ್ತೆ ಕಲಾವಿದೆರ್ ಮೈರಾ ಕೇಪು ತಂಡದ ನೂತನ ನಾಟಕದ ಶೀರ್ಷಿಕೆ ಬಿಡುಗಡೆ

- Advertisement -
- Advertisement -
vtv vitla

ವಿಟ್ಲ: ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದೆರ್ ತಂಡದ ಈ ವರ್ಷದ ನೂತನ ಕಲಾ ಕೃತಿಯ ಶೀರ್ಷಿಕೆ ಬಿಡುಗಡೆ ಇಂದು ಬೆಳಿಗ್ಗೆ ಕೇಪು ಶ್ರೀ ಸುಬ್ರಯ ದೇವಸ್ಥಾನದಲ್ಲಿ ನಡೆಯಿತು.

ತುಳು ರಂಗ ಭೂಮಿ ಬದಲಾವಣೆಯ ಹರಿಕಾರ ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ಮತ್ತು ರಂಗದ ರಾಜೇ ಸುಂದರ ರೈ ಮಂದಾರ ಇವರ ಮುಖಂತರ ಹೊಸ ನಾಟಕದ ಕೃತಿ “ಕಲ್ಜಿಗದ ಕಾಲಿ ಅಪ್ಪೆ ಮಂತ್ರ ದೇವತೆ” ಎಂಬ ಹೊಸ ಶೀರ್ಷಿಕೆ ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸುಂದರ ರೈ ಮಂದಾರ, ವಿಟ್ಲ ಅರಮನೆಯ ಕೃಷ್ಣಯ್ಯ, ಅಕ್ಷತ್ ವಿಟ್ಲ, ದುರ್ಗಾ ಮಿತ್ರ ವೃಂದದ ಅಧ್ಯಕ್ಷರು ಶೀನ ನಾಯ್ಕ ಕಲ್ಲಪಾಪು, ಸದ್ಯಸ್ಯರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ , ಪುರುಷೋತ್ತಮ, ಜಗಜೀವನ್ ಶೆಟ್ಟಿ, ಪುಗರ್ತೆ ಕಲಾ ತಂಡದ ಅಧ್ಯಕ್ಷರು ಪದ್ಮನಾಭ ಕಲ್ಲಂಗಳ, ನಿರ್ದೇಶಕ ನಿತಿನ್ ಹೊಸಂಗಡಿ ಉಪಸ್ಥಿತರಿದ್ದರು.

ಈ ನಾಟಕವು ನವರಾತ್ರಿ ಪ್ರಯುಕ್ತ ಪ್ರಥಮ ಪ್ರದರ್ಶನ 03/10 ರಂದು ಅಳಿಕೆ ಮಜಲುನಲ್ಲಿ ನಡೆಯಲಿದೆ ಎಂದು ತಂಡದ ಅಧ್ಯಕ್ಷರು ತಿಳಿಸಿದರು.

astr
- Advertisement -

Related news

error: Content is protected !!