- Advertisement -
- Advertisement -

ವಿಟ್ಲ: ಸಮೀಪದ ಪುಚ್ಚೆಗುತ್ತು ಬ್ರಹ್ಮ ಮುಗೇರ ದೈವಗಳ ಸೇವಾ ಟ್ರಸ್ಟ್ ಮತ್ತು ಶಕ್ತಿ ಯುವ ಕೇಂದ್ರದ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ವಿಟ್ಲ ಸಮೀಪದ ಕಾಶಿಮಠದಿಂದ ಪುಚ್ಚೆಗುತ್ತು ತೆರಳುವ ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ಸಂಚಾರ ಭಾರೀ ತೊಂದರೆಯಾಗುತ್ತಿತ್ತು. ಈ ಬಗ್ಗೆ ಗಮನಹರಿಸಿದ ಸಂಘಟನೆಯ ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಸೇರಿ ಕಾಶಿಮಠದಿಂದ ಪುಚ್ಚೆಗುತ್ತುವರೆಗೆ ಗಿಡಗಂಟಿಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.

ಈ ಸಂದರ್ಭ ಶಕ್ತಿ ಯುವ ಕೇಂದ್ರದ ಅಧ್ಯಕ್ಷ ಪ್ರವೀಣ್ ಪಿ, ಬ್ರಹ್ಮಮುಗೇರ ದೈವಗಳ ಸೇವಾ ಟ್ರಸ್ಟ್ ಅಧ್ಯಕ್ಷ ಪಾಂಡುರಂಗ ಪಿ, ಸದಸ್ಯರು ಭಾಗವಹಿಸಿದ್ದರು.



- Advertisement -








