- Advertisement -
- Advertisement -
ವಿಟ್ಲ: ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದ್ದು ಇಂದು ಆಯುಧ ಪೂಜೆಯ ಸಂಭ್ರಮ ಮೇಳೈಸಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಇಂದು ಆಯುಧ ಪೂಜೆ ನಡೆಯಿತು.


ಸದಾ ಗತ್ತು ಗಾಂಭೀರ್ಯದಿಂದಿರುವ ಪೊಲೀಸ್ ಠಾಣೆ ವಿವಿಧ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿತ್ತು. ವಾಹನ, ಪಿಸ್ತೂಲ್, ಬೇಡಿ ಹೀಗೆ ಠಾಣೆಯಲ್ಲಿರುವ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು.



ಈ ವೇಳೆ ಪೊಲೀಸರು ಬಿಳಿ ಬಣ್ಣದ ವಸ್ತ್ರ ತೊಟ್ಟು ಮಿಂಚಿದರು. ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸಹ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.



- Advertisement -








