Wednesday, May 8, 2024
spot_imgspot_img
spot_imgspot_img

ವಿಟ್ಲ: ಫೆ.9ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಗುರುವಂದನೆ ಶ್ರೀ ಹನುಮಾನ್ ಚಾಲೀಸಾ ಪಠಣ, ಸಾಧಕರಿಗೆ ಸನ್ಮಾನ ಮತ್ತು ಅರ್ಹ 60 ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಷಷ್ಠ್ಯಬ್ದ ಸಂಭ್ರಮ-2021 ಜ್ಞಾನವಾಹಿನಿ ವಿಟ್ಲ ವಲಯ ಸಮಿತಿ ಇದರ ವತಿಯಿಂದ ಶ್ರೀ ಗುರುವಂದನೆ ಶ್ರೀ ಹನುಮಾನ್ ಚಾಲೀಸಾ ಪಠಣ, ಸಾಧಕರಿಗೆ ಸನ್ಮಾನ ಮತ್ತು ಅರ್ಹ 60 ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮವು ಫೆ.9ರ ಬುಧವಾರದಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಸಂಜೆ 5 ಗಂಟೆಗೆ ಶ್ರೀ ಗುರುವಂದನೆ ಮತ್ತು ಸಭಾ ಕಾರ್ಯಕ್ರಮವು ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್’ನ ಪರಮಪೂಜ್ಯ ಮಾತಾನಂದಮಯೀಯವರು ಆಶೀರ್ವಚನ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಬಂಗಾರು ಅರಸರು, ವಿಟ್ಲ ವಲಯ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ-ವಿಟ್ಲ, ಪುತ್ತೂರು ಶಾಸಕ ಸಂಜೀವ ಮಠಂದೂರು , ಷಷ್ಠ್ಯಬ್ದ ಸಂಭ್ರಮ ಕೇಂದ್ರೀಯ ಸಮಿತಿ, ಒಡಿಯೂರು ಇದರ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ ಇದರ ಅಧ್ಯಕ್ಷ ಎಚ್. ಜಗನ್ನಾಥ್ ಸಾಲಿಯಾನ್.

ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಯೋಜನಾಧಿಕಾರಿ ಚೆನ್ನಪ್ಪ ಗೌಡ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ ಇದರ ಅಧ್ಯಕ್ಷ ಡಿ. ಪ್ರಭಾಕರ ಶೆಟ್ಟಿ, ಶ್ರೀ ದೇವತಾ ಸಮಿತಿ, ವಿಟ್ಲ ಇದರ ಅಧ್ಯಕ್ಷ ಯಂ. ರಾಧಾಕೃಷ್ಣ ನಾಯಕ್, ಬಿಲ್ಲವ ಸಂಘ ವಿಟ್ಲ ಇದರ ಅಧ್ಯಕ್ಷ ಹರೀಶ್ ಸಿ. ಎಚ್, ಜೇಸಿಐ ವಿಟ್ಲ ಇದರ ಅಧ್ಯಕ್ಷ ಚಂದ್ರಹಾಸ ಕೊಪ್ಪಳ, ರೋಟರಿ ಕ್ಲಬ್ ವಿಟ್ಲ ಇದರ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ಭಾಗಿಯಾಗಲಿದ್ದಾರೆ.

ಸಂಜೆ 4 ಗಂಟೆಗೆ ಸ್ವಾಮೀಜಿಗಳ ಉಪಸ್ಥಿತಿಯೊಂದಿಗೆ ಆರ್ ಕೆ ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಇವರ ನೇತೃತ್ವದಲ್ಲಿ “ಭಜನಾ ಮೆರವಣಿಗೆ”ಯು ವಿಟ್ಲ ಜೈನಬಸದಿಯ ಬಳಿ ಸೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ಆಗಮಿಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!