Thursday, May 9, 2024
spot_imgspot_img
spot_imgspot_img

ವಿಟ್ಲ: ಬಜರಂಗದಳದ ಮುಖಂಡನ ಮೇಲೆ ಹಲ್ಲೆ ಪ್ರಕರಣ; 13 ಮಂದಿಯ ವಿರುದ್ದ ದೂರು ದಾಖಲು

- Advertisement -G L Acharya panikkar
- Advertisement -

ವಿಟ್ಲ: ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಇವರು ಸಾಲೆತ್ತೂರು-ಅಗರಿ ಎಂಬಲ್ಲಿ ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ 13 ಮಂದಿಯ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಶಾಂತ, ತೇಜಸ್, ಗೀರಿಶ, ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್‌, ಶಶಿಕುಮಾರ ಹಾಗೂ ಇತರ ಇಬ್ಬರ ಮೇಲೆ ದೂರು ನೀಡಿದ್ದಾರೆ.

ದೂರಿನಲ್ಲಿರುವ ಆರೋಪವೇನು?
ಆಪಾದಿತ ಪ್ರಶಾಂತ್ ತುಳು ಭಾಷೆಯಲ್ಲಿ “ಈ ಸಂಘಟನೆಡ್‌ ಭಾರಿ ರಾಪನಾ? ನಿನನ್‌ ಕೆರಂದೆ ಬುಡಾಯೇ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ತಲವಾರಿನಿಂದ ಚಂದ್ರಹಾಸ ಕನ್ಯಾನ ಅವರ ತಲೆಯ ಭಾಗಕ್ಕೆ ಕಡಿದಿದ್ದು, ಆಗ ಆತನೊಂದಿಗಿದ್ದ ಇತರರು ತುಳು ಭಾಷೆಯಲ್ಲಿ “ಚಂದ್ರಹಾಸನ್‌ ಕೆರ್‌” ಎಂಬುದಾಗಿ ಹೇಳಿದ್ದಾನೆ. ತೇಜಸ್‌ನು ಪುನಃ ಆತನ ಕೈಯಲ್ಲಿದ್ದ ತಲವಾರಿನಿಂದ ಚಂದ್ರಹಾಸ ಕನ್ಯಾನ ಅವರ ತಲೆಯ ಭಾಗಕ್ಕೆ ಕಡೆದುದಲ್ಲದೇ ಗಿರೀಶನು ಆತನ ಕೈಯಲ್ಲಿದ್ದ ಚೂರಿಯಿಂದ ಚುಚ್ಚಿದನು, ಉಳಿದವರೆಲ್ಲರೂ ಸೇರಿಕೊಂಡು ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆ ಸಮಯಕ್ಕೆ ನಾಗೇಶನ ಮನೆಯವರು ಬೊಬ್ಬೆ ಹೊಡೆದು ಪೊಲೀಸ್‌ರಿಗೆ ಪೋನ್‌ ಮಾಡಿದಾಗ ಆರೋಪಿಗಳೆಲ್ಲರೂ ಇದೇ ರೀತಿ ಸಂಘಟಣೆಯಲ್ಲಿ ಮೆರೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ವಿಟ್ಲ: ಬಜರಂಗದಳದ ಮುಖಂಡನಿಗೆ ಹಲ್ಲೆ ಪ್ರಕರಣ; ಹೈಡ್ರಾಮಾ…!? ಕೌಂಟರ್‌ ಕೇಸ್‌ನಲ್ಲಿ ಏನಿದೆ..?

- Advertisement -

Related news

error: Content is protected !!