Saturday, April 20, 2024
spot_imgspot_img
spot_imgspot_img

ವಿಟ್ಲ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ; ಕುಖ್ಯಾತ ಖದೀಮ, ಹಲವು ಪ್ರಕರಣಗಳ ಆರೋಪಿ ರಾಧುಕಟ್ಟೆ ಬಶೀರ್ ನ ಬಂಧನ..!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತ ಆರೋಪಿಯಾದ ರಾಧುಕಟ್ಟೆ ಬಶೀರ್ ಬಂಧಿತ ಆರೋಪಿ.

vtv vitla
vtv vitla

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿರುವ ಹೈದರಾಲಿರವರ ಬೀಗ ಹಾಕಿದ ಮನೆಯ ಬೀಗವನ್ನು ಮುರಿದು ರಂದು ರಾತ್ರಿ ಬೆಡ್‌ರೂಂನಲ್ಲಿರುವ ಎರಡು ಗಾದ್ರೇಜ್‌ಗಳಲ್ಲಿಟ್ಟಿದ್ದ 2.5 ಗ್ರಾಂ ಚಿನ್ನದ ಉಂಗುರ-1 ಹಾಗೂ 4 ಗ್ರಾಂ ನ ಕಿವಿಯ ಓಲೆ-01ನ್ನು ಕಳವುಗೈದಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಯನ್ನು ವಿಟ್ಲ ಠಾಣಾ ವ್ಯಾಪ್ತಿಯ ರಾಧುಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯಿಂದ ಕಳ್ಳತನ ಮಾಡಿದ 2.250 ಗ್ರಾಂ ತೂಕದ ಚಿನ್ನದ ಕಿವಿಯೋಲೆ -01 ಮತ್ತು 3.200 ಗ್ರಾಂ ತೂಕದ ಚಿನ್ನದ ಉಂಗುರ-01 ಹಾಗೂ ಆರೋಪಿತನಿಂದ ಕೃತ್ಯಕ್ಕೆ ಬಳಸಲಾದ ಯಮಹಾ ಕಂಪೆನಿಯ ಮೋಟಾರ್ ಸೈಕಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಅಬ್ದುಲ್‌ ಬಶೀರ್ ಈತನು ವಿಟ್ಲ ಠಾಣಾ ವ್ಯಾಪ್ತಿಯ ಹಲವಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು. ಎಂಓಬಿ ಆಸಾಮಿಯಾಗಿರುವುದಲ್ಲದೇ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಚಿನ್ನದಂಗಡಿ ಕೊರೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ಇತ್ತೀಚೆಗಸ್ಟೆ ಜಿಲ್ಲಾ ಕೇಂದ್ರ ಕಾರಾಗೃಹ ಮಂಗಳೂರು ಇಲ್ಲಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್‌ ಭಗವಾನ ಸೋನಾವಣೆ ಮತ್ತು ಅಡಿಷನಲ್‌ ಎಸ್‌ಪಿ ಕುಮಾರಚಂದ್ರರವರುಗಳ ಮಾರ್ಗದರ್ಶನ, ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಪ್ರತಾಪ ಸಿಂಗ್‌ ಥೂರಟ್‌ ರವರ ನೇತ್ರತ್ವ, ನಾಗರಾಜ್‌ ಹೆಚ್‌ ಈ ಪೊಲೀಸ್‌ ನಿರೀಕ್ಷಕರು ವಿಟ್ಲ ಠಾಣೆ ರವರ ಸಾರಥ್ಯ , ಎಸ್ ಐ ಸಂದೀಪಕುಮಾರ್‌ ಶೆಟ್ಟಿ, ಸಂಜೀವ ಪುರುಷ ಪಿಎಸೈ ತನಿಖೆ1, ಸಿಬ್ಬಂದಿಗಳಾದ ಜಯರಾಮ, ಪ್ರಸನ್ನ, ಹೇಮರಾಜ, ಅಶೋಕ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

vtv vitla
vtv vitla
- Advertisement -

Related news

error: Content is protected !!