Thursday, June 18, 2026
spot_imgspot_img
spot_imgspot_img

ವಿಟ್ಲ: ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಜೀವಬೆದರಿಕೆ‌; ಮಹಿಳೆಯಿಂದ ದೂರು

- Advertisement -
- Advertisement -

ವಿಟ್ಲ: ಪ್ರಿಯತಮೆಯನ್ನು ನೋಡಲು ಬಂದ ಯುವಕ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಪ್ರಕರಣ ನನ್ನ ಮಗನೊಂದಿಗಿರುವ ಹಳೇ ದ್ವೇಷದ ಹಿನ್ನೆಲೆ ನಮ್ಮ ಮನೆಗೆ ನುಗ್ಗಿದ ತಂಡವೊಂದು ನನ್ನ ಮೈಗೆ ಕೈಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆ ಎಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

vtv vitla

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆ ನಿವಾಸಿ ಬಾಪಕುಂಞರವರ ಪತ್ನಿ ಮರಿಯಮ್ಮ ದೂರುದಾರರಾಗಿದ್ದು, ಶಮೀರ್, ಇಸಾಕ್, ಹಕೀಂ ಕೂರ್ನಡ್ಕ ಸಹಿತ ಪ್ರಕರಣದ ಆರೋಪಿಗಳಾಗಿದ್ದಾರೆ.

ಜ.19ರಂದು ನಾನು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆಯ ಮೈಕೆಯ ನಮ್ಮ ಮನೆಯಲ್ಲಿದ್ದ ವೇಳೆ ಕಾರಿನಲ್ಲಿ ಬಂದ ಶಮೀರ್, ಇಸಾಕ್, ಹಕೀಂ ಕೂರ್ನಡ್ಕ ಮತ್ತು ಪರಿಚಯವಿಲ್ಲದ ಇನ್ನೊಬ್ಬ ನಮ್ಮ ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನನ್ನ ಮೈಗೆ ಕೈ ಹಾಕಿ, ದೊಣ್ಣೆಯಿಂದ ಹಲ್ಲೆ ಮಾಡಿ, ನನ್ನನ್ನು ದೂಡಿ ಹಾಕಿದ್ದಲ್ಲದೆ ನಮ್ಮ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಘಟನೆಗೆ ನನ್ನ ಮಗ ಹಕೀಂ ಹಾಗೂ ಶಮೀರ್ ಎಂಬಾತನ ಮಧ್ಯೆ ಇರುವ ಪೂರ್ವ ದ್ವೇಷವೇ ಕಾರಣವೆಂದು ಮರಿಯಮ್ಮರವರು ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!