Thursday, April 25, 2024
spot_imgspot_img
spot_imgspot_img

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು(ರಿ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆ; ನೂತನ ಕಾರ್ಯಕಾರಿಣಿಯ ರಚನೆ

- Advertisement -G L Acharya panikkar
- Advertisement -

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆಯು ಸಂಘದ ಚಂದಳಿಕೆಯ ಕಾರ್ಯಾಲಯಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ದಿಗ್ವಿಜಯ ಹರ್ಬಲ್ ಚಂದಳಿಕೆ ಇದರ ಚಯರ್ ಮೆನ್ ಎನ್. ದಿನಕರ ಭಟ್ ಭಾಗವಹಿಸಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು .

ನೂತನ ಅಧ್ಯಕ್ಷರಾಗಿ ಚಿದಾನಂದ ಶೆಟ್ಟಿ ಉಜಿರೆಮಾರು , ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು , ಕಾರ್ಯಾಧ್ಯಕ್ಷರಾಗಿ ಗಂಗಾಧರ ಪೂಜಾರಿ ಪರನೀರು , ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು , ಗಣೇಶ್ ಪಟ್ಲ ಮತ್ತು ವನೀತ್ ಜೋಗಿ ಡೆಪ್ಪಿಣಿ , ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಕೇಪುಳಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ,ಜತೆ ಕಾರ್ಯದರ್ಶಿಗಳಾಗಿ ಪ್ರವೀಣ್ ಕಟ್ಟತ್ತಿಲ ಮತ್ತು ಮನೋಜ್ ಕುಮಾರ್, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜತೆ ಕೋಶಾಧಿಕಾರಿಯಾಗಿ ಹೃದಯ್ ಜೋಗಿ ಮತ್ತು ಹರೀಶ್ ಕೊಪ್ಪಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಮಡಿವಾಳ ಅಬೀರಿ, ಪ್ರಧಾನ ಸಂಚಾಲಕರಾಗಿ ದಿವಾಕರ ಶೆಟ್ಟಿ ಅಬೀರಿ ಮತ್ತು ವನೀತ್ ಅಬೀರಿ,

ದತ್ತಿನಿಧಿ ಪ್ರಮುಖ್ ಆಗಿ ಶಶಿಧರ ಕೇಪುಳಗುಡ್ಡೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ಮೋಹಿತ್ ಅಬೀರಿ, ಕ್ರೀಡಾ ಕಾರ್ಯದರ್ಶಿಯಾಗಿ ಉದಯ ಅಬೀರಿ , ಕಾನೂನು ಸಲಹೆಗಾರರಾಗಿ ಗೋವಿಂದ ರಾಜ್ ಪೆರುವಾಜೆ , ಸಾಮಾಜಿಕ ಜಾಲತಾಣ ಪ್ರಮುಖ್ ಆಗಿ ಪುನೀತ್ ಜೋಗಿ ಕುರುಂಬಳ ಮತ್ತು ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ , ದೇಜಪ್ಪ ಪೂಜಾರಿ ನಿಡ್ಯ , ಸಂಜೀವ ಪೂಜಾರಿ ವಿಟ್ಲ , ಈಶ್ವರ ಬಂಗೇರ ಅಬೀರಿ , ವಿಠಲ ಪೂಜಾರಿ ಅತಿಕಾರಬೈಲು , ಲೋಕನಾಥ ಕುರುಂಬಳ , ಚಂದ್ರಹಾಸ ಅಬೀರಿ ಮತ್ತು ಸುಶಾಂತ್ ಸಾಲಿಯಾನ್ ಚಂದಳಿಕೆ ಇವರುಗಳು ಆಯ್ಕೆಯಾದರು .

ಮಹಾಸಭೆಯಲ್ಲಿ ಕಳೆದ 3 ವರ್ಷದಲ್ಲಿ ಸುಮಾರು 4.30 ಲಕ್ಷ ರೂಗಳನ್ನು ದತ್ತಿನಿಧಿ ಯೋಜನೆಯಡಿಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಅಲ್ಲದೆ ಯುವ ಕೇಸರಿಯ ಸದಸ್ಯ ಚಂದ್ರಶೇಖರ ಗೌಡ ಕಾಯರ್ ಮಾರ್ ಇವರು ಕಳೆದ ತಿಂಗಳು ಮರಣಗೊಂಡಿದ್ದು ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವಕೇಸರಿಯ ಸುಶಾಂತ್ ಸಾಲಿಯಾನ್ ಸ್ವಾಗತಿಸಿ , ದಿವಾಕರ ಶೆಟ್ಟಿ ಅಬೀರಿ ವಂದಿಸಿ , ವಿಠಲ ಪೂಜಾರಿ ಅತಿಕಾರಬೈಲು ನಿರೂಪಿಸಿದರು ಮತ್ತು ಗಣೇಶ್ ಅಬೀರಿ ಸಹಕರಿಸಿದರು.

driving
- Advertisement -

Related news

error: Content is protected !!