Thursday, June 18, 2026
spot_imgspot_img
spot_imgspot_img

ವಿಟ್ಲ: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಉಮ್ಮರ್ ವಿರುದ್ಧ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ದೂರು ದಾಖಲು!

- Advertisement -
- Advertisement -

ವಿಟ್ಲ: ವಿಟ್ಲದ ವಿಹೆಚ್ ಕಾಂಪ್ಲೆಕ್ಸ್ ನಲ್ಲಿರುವ ಉಮ್ಮರ. ಕೆ ಎಂಬವರ ವಕೀಲ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿಟ್ಲ ಮೂಲದ ಯುವತಿಯೊರ್ವಳೊಂದಿಗೆ ವಕೀಲ ಉಮ್ಮರ್ ಅಸಭ್ಯವಾಗಿ ವರ್ತಿಸಿದ ಇದನ್ನು ಮನೆಗೆ ತಿಳಿಸಿದರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿ ಪ್ರಕರಣ ಮುಚ್ಚಿಹಾಕಲು ನೋಡಿದ ಘಟನೆ ಬೆಳಕಿಗೆ ಬಂದಿದೆ.

ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಆರೋಪಿ ಉಮ್ಮಾರ್ ನ್ನು ಬಂಧಿಸಿ ಕೆಲ ಸಮಯದಲ್ಲೆ ಜಾಮೀನು ತೆಗೆದುಕೊಂಡು ಹೊರಗೆ ಬಂದ ತಕ್ಷಣ ಕಂಪ್ಲೇಂಟ್ ಮಾಡಿದ ಯುವತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ಬಂದಿರುತ್ತದೆ.

ಭಾನುವಾರ ಸಂಜೆ ಅಪರಾಧಿಯ ವಿರುದ್ಧ ಪೊಲೀಸ್ ಠಾಣೆ ಅಧಿಕಾರಿಯನ್ನು ಭೇಟಿಯಾಗಿ ಕೇಸು ದಾಖಲಿಸಲು ಒತ್ತಡ ಹಾಕಲಾಗಿದೆ ಅಲ್ಲದೆ ವಿಟ್ಲ ಪರಿಸರದಾದ್ಯಂತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ನಡೆಯುತ್ತಿದೆ ಇದನ್ನು ಮಟ್ಟ ಹಾಕಬೇಕೆಂದು ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ವಿನಂತಿಸುತ್ತಿದೆ ಹಾಗೂ ಇದು ಮುಂದುವರಿದಲ್ಲಿ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಪ್ರತಿಭಟಿಸುತ್ತದೆ. ಇಂತಹ ಜಿಹಾದಿ ಶಕ್ತಿಗಳ ವಿರುದ್ದ ಶಾಶ್ವತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂದಪಟ್ಟ ಅಧಿಕಾರಿಯನ್ನು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ನರಸಿಂಹ ಶೆಟ್ಟಿ ಮಾಣಿ, ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷರಾದ ಗಣೇಶ್ ಕುಲಾಲ್ ಕೆದಿಲ, ತಾಲೂಕು ಕಾರ್ಯದರ್ಶಿ ಹರ್ಷ ರೈ ವಿಟ್ಲ, ಮಾತೃಸುರಕ್ಷಾ ಸಂಯೋಜಕ ಲಿತೀಶ ಗಡಿಯಾರ, ಹಿಂದೂ ಯುವ ವಾಹಿನಿ ಸಹ ಸಂಯೋಜಕ ದಿವಾಕರ್ ಪೆರ್ನೆ, ಚೇತನ್ ಕಡಂಬು, ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!