ನಿಸರ್ಗದ ಫೋಟೋ ಪ್ರದರ್ಶನ ಜೂ. 15 ಮತ್ತು 16 ರಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ





ವಿಟ್ಲ: ರಾಧಕೃಷ್ಣ ಪೈ ಯವರ 60 ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಪುಸ್ತಕ ಬಿಡುಗಡೆ ಹಾಗೂ ನಿಸರ್ಗದ ಫೋಟೋ ಪ್ರದರ್ಶನ ಕಾರ್ಯಕ್ರಮ ವಿಟ್ಲ ಹನುಮಗಿರಿ ಫಲಿಮಾರ್ ವಿಠಲ ಪೈ ಸಭಾಭವನದಲ್ಲಿ ನಡೆಯಿತು.


ಶ್ರೀ ಸಿಎ. ಕೆ. ಉಲ್ಲಾಸ್ ಕಾಮತ್, ಫೌಂಡರ್ ಯುಕೆ & ಕೋ., ಬೆಂಗಳೂರು, ಶ್ರೀ ಅನಂತಕೃಷ್ಣ ಹೆಬ್ಬಾರ್, ಸಾರಂಗ ವಿಟ್ಲ, ಶ್ರೀ ಜಯಪ್ರಕಾಶ್ ವಿ. (ಸೀನಿಯರ್ ಸಿವಿಲ್ ಜಡ್ಸ್ & ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್, ಸಕಲೇಶಪುರ), ಜೇಸಿ. ಊಉಈ. ಶ್ರೀಧರ್ ಕೊಡಕ್ಕಲ್ (ಜೆಸಿಐ ಇಂಡಿಯಾದ ಹಿರಿಯ ತರಬೇತುದಾರ ಹಾಗೂ ಶೈಕ್ಷಣಿಕ ಪುಸ್ತಕಗಳ ಬರಹಗಾರ ಮತ್ತು ಪ್ರಕಾಶಕ), ಡಾ| ಅರುಂಧತಿ ಧಾರೇಶ್ವರ್, ಪಾರಿಜಾತ, ವಿಟ್ಲ ಇವರುಗಳು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಧಕೃಷ್ಣ ಪೈ ಯವರನ್ನು ಹಲವು ಒಕ್ಕೂಟ ಹಾಗೂ ಬಂಧು ಮಿತ್ರರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲಲ್ಲಿ ರಾಧಕೃಷ್ಣ ಪೈಯವರ ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು, ಉಪಸ್ಥಿತರಿದ್ದರು.
ಉದ್ಯಮಿ ರಾಧಕೃಷ್ಣ ಪೈ ಸ್ವಾಗತಿಸಿ, ಉದ್ಯಮಿ ಸುಬ್ರಾಯ ಪೈ ವಂದಿಸಿದರು. ಅರವಿಂದ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.


ನಿಸರ್ಗದ ಫೋಟೋ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಇಂದು ಸಂಜೆ 4 ರಿಂದ 8 ಗಂಟೆಯವರೆಗೆ ಅವಕಾಶ ಇರುತ್ತದೆ. ನಾಳೆ ಜೂ. 15 ನೇ ಸೋಮವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ಗಂಟೆಯ ವರೆಗೆ ಹಾಗೂ ಜೂ. 16 ನೇ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ.








