Sunday, April 28, 2024
spot_imgspot_img
spot_imgspot_img

ವಿಟ್ಲ: ವರ ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಪ್ರಕರಣ; ಪ್ರಮುಖ ಆರೋಪಿ ಬಾಶಿತ್ ನ ಬಂಧನಕ್ಕೆ ಸಹಕರಿಸಿದ ಪೊಲೀಸ್ ಇಲಾಖೆ, ಸಿ.ಎ.ಎಸ್.ಎಫ್ ಅಧಿಕಾರಿಗಳು ಹಾಗೂ ಸಮಸ್ತ ಹಿಂದೂ ಬಾಂಧವರಿಗೆ ಅಭಿನಂದನೆ ಸಲ್ಲಿಸಿದ ವಿ. ಹಿಂ. ಪ ಬಜರಂಗದಳ

- Advertisement -G L Acharya panikkar
- Advertisement -

ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಈ ಹಿಂದೆ ಮದುವೆ ಮನೆಯಲ್ಲಿ ಮದುಮಗ ಕೊರಗಜ್ಜನ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆ ಘಟನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆ ವಿಟ್ಲದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡವು ಆರೋಪಿಗಳನ್ನು ಬಂಧಿಸುವಂತೆ ವಿವಿಧ ಪ್ರತಿಭಟನೆಗಳನ್ನು, ವಿಟ್ಲ ಬಂದ್’ಗೆ ಕರೆ ಕೊಟ್ಟಿದ್ದರು. ಈ ವೇಳೆ ವಿಟ್ಲ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದರು. ಮತ್ತು ಕಲವೇ ದಿನಗಳಲ್ಲಿ ಘಟನೆಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ರು. ಆದರೆ ಕಲವೇ ದಿನಗಳಲ್ಲಿ ಆರೋಪಿಗಳನ್ನು ಜಾಮೀನು ಮೂಲಕ ಬಿಡುಗಡೆಮಾಡಲಾಗಿತ್ತು.

vtv vitla
vtv vitla

ಆದರೆ ಘಟನೆಯ ಪ್ರಮುಖ ಆರೋಪಿಯ ಬಂಧನವಾಗದ ಹಿನ್ನಲೆ ವಿಶ್ವಹಿಂದೂ ಪರಿಷತ್ ವಿಟ್ಲ ಪೊಲೀಸರ ಮೇಲೆ ಬಲವಾದ ಒತ್ತಡ ಹಾಕಿತ್ತು. ಈ ಹಿನ್ನಲೆ ಆರೋಪಿಯ ಬಂಧಕ್ಕಾಗಿ ಬೆನ್ನತ್ತಿದ ಪೊಲೀಸ್ ಇಲಾಖೆ 3 ರಾಜ್ಯಗಳಿಗೆ ಲುಕ್‌ಔಟ್ ನೊಟೀಸ್ ಜಾರಿಗೊಳಿಸಿತ್ತು. ಈ ರೀತಿಯಾಗಿ ತಕ್ಷಣ ಅಲರ್ಟ್ ಆಗಿ ತನಿಖೆ ಮುಂದುವರಿಸಿದ ಕೇರಳ ಪೊಲೀಸ್ ಇಲಾಖೆ ಘಟನೆಯ ಪ್ರಮುಖ ಆರೋಪಿ ಉಮ್ರುಲ್ಲಾ ಬಾಶಿತ್ ಎಂಬಾತನನ್ನು ವಶಕ್ಕೆ ಪಡೆದು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಈ ಘಟನೆಯ ಪ್ರಮುಖ ಆರೋಪಿಯನ್ನು ಬಂಧಿಸಬೇಕೆಂದು ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಬಹಳ ಶ್ರಮ ವಹಿಸಿದ್ದೆವು.. ಹೊರ ದೇಶಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಇಂಟರ್ ಪೋಲ್ ಏರ್ಪೋರ್ಟ್ ನ ಸಿ.ಎ.ಎಸ್.ಎಫ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಸಹಕರಿಸಿದ ಎಲ್ಲಾ ಪೊಲೀಸ್ ಇಲಾಖೆ ಹಾಗೂ ಸಿ.ಎ.ಎಸ್.ಎಫ್ ಅಧಿಕಾರಿಗಳಿಗೆ ಗೌರವಪೂರ್ವಕ ಅಭಿನಂದನೆಗಳು. ಮತ್ತು ನಮ್ಮೊಂದಿಗೆ ಆರೋಪಿಯ ಬಂಧನಕ್ಕೆ ಆಗ್ರಹಿಸಿದ ಎಲ್ಲಾ ಸಂಘಟನಾಕಾರರಿಗೂ, ಸಮಸ್ತ ಹಿಂದೂ ಬಾಂಧವರಿಗೆ ಹೃದಯಾಂತರಾಳದ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ಕುಮಾರ್ ಐ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ಅಧ್ಯಕ್ಷರಾದ ಪದ್ಮನಾಭ ಕಟ್ಟೆ ವಿಟಿವಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!