Saturday, May 18, 2024
spot_imgspot_img
spot_imgspot_img

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಹಾಗೂ ಆರ್. ಕೆ. ಕುಣಿತ ಭಜನಾ ತಂಡ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ

- Advertisement -G L Acharya panikkar
- Advertisement -

ವಿಟ್ಲ: ಭಜನೋತ್ಸವ ಸಮಿತಿ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಹಾಗೂ ಆರ್. ಕೆ. ಕುಣಿತ ಭಜನಾ ತಂಡ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ವಿಶೇಷ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ವಿಟ್ಲದ ಉದ್ಯಮಿ ರಾಧಾಕೃಷ್ಣ ನಾಯಕ್ ರವರು ದೀಪೋಜ್ವಲನೆಯ ಮೂಲಕ ನೆರವೇರಿಸಿದರು. ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಭಜನೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಭಜನಾ ಪರಿಷತ್ ಅಧ್ಯಕ್ಷ ಕೃಷ್ಣಯ್ಯ ಕೆ, ಆರ್. ಕೆ ಕುಣಿತ ಭಜನಾ ತಂಡದ ನಿರ್ದೇಶಕ ರಾಜೇಶ್ ವಿಟ್ಲ, ಹಿರಿಯ ಭಜನಾ ಮಾರ್ಗದರ್ಶಕ ಶೀನಪ್ಪ ರೈ ಕೆಲಿಂಜ, ಜಯರಾಮ ಬಲ್ಲಾಳ್, ದಿನೇಶ್ ಪಟ್ಲ, ಮೈತ್ರೆಯಿ ಗುರುಕುಲದ ವ್ಯವಸ್ಥಾಪಕರು ಜಗನ್ನಾಥ ಕಾಸರಗೋಡು, ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ವಿಟ್ಲ, ಜಯರಾಮ ಕುಂಟ್ರಕಲ, ಬಿಲ್ಲವ ಸಂಘ (ರಿ)ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷ ಡಾ. ಗೀತಪ್ರಕಾಶ್ ಹಾಗೂ ಅನೇಕ ಹಿರಿಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಮಧ್ಯಾಹ್ನ ಶ್ರೀ ಪಂಚಲಿಂಗೇಶ್ವರ ದೇವರಿಗೆ ಶತರುದ್ರ ಅಭಿಷೇಕ, ಅನ್ನಸಂತರ್ಪಣೆ ಬಳಿಕ 3.30 ಗಂಟೆಗೆ ಮೇಗಿನಪೇಟೆ ಮಹಮ್ಮಾಯಿ ಸನ್ನಿಧಿಯಿಂದ ವಿಶೇಷ ಮೆರವಣಿಗೆಯು ಶಂಖ, ಜಾಗಟೆ, ಕಲಶ, ಭಜಕರ ತಂಡ , ಕುಣಿತ ಭಜನಾ ತಂಡ, ಆಕರ್ಷಕ ಟ್ಯಾಬ್ಲೋಗಳ ಜೊತೆ ನಾಮ ಸಂಕೀರ್ತನಮಯ ಕ್ಷಣವಾಗಿ, 6.00 ಗಂಟೆಗೆ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಮಂಗಲೋತ್ಸವ ನಡೆಯಲಿದೆ.

ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ಸಿರಿ ಕೀರ್ತನೆ ಮಂಗಲೋತ್ಸವಕ್ಕೆ ಮೆರುಗು ನೀಡಲಿದ್ದು, ಯತಿವರ್ಯರಾದ ಎಡನೀರು ಶ್ರೀಗಳು , ಮಾಣಿಲ ಶ್ರೀಗಳು , ಒಡಿಯೂರು ಶ್ರೀಗಳು , ಹಾಗೂ ಕಣಿಯೂರು ಶ್ರೀ ಗಳು ಆಶೀರ್ವಚನ ನೀಡಲಿರುವರು. ಅನೇಕ ಭಜನಾ ಮಂಡಳಿಗಳು, ಸಂಘ ಸಂಸ್ಥೆಗಳು ಸಹಕರಿಸಲಿರುವರು.

- Advertisement -

Related news

error: Content is protected !!