Friday, April 26, 2024
spot_imgspot_img
spot_imgspot_img

ವಿಟ್ಲ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ ಸಿ ಟ್ರಸ್ಟ್(ರಿ) ವಿಟ್ಲ ತಾಲ್ಲೂಕು ವತಿಯಿಂದ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಕೃಷಿ ಸಲಕರಣೆ ವಿತರಣೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶ

- Advertisement -G L Acharya panikkar
- Advertisement -

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವಿಟ್ಲ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಿಟ್ಲ ತಾಲ್ಲೂಕು, ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ವಿಟ್ಲ ತಾಲ್ಲೂಕು ಇದರ ವತಿಯಿಂದ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಪ್ರಗತಿಬಂದು ತಂಡಗಳಿಗೆ ಕೃಷಿ ಸಲಕರಣೆ ವಿತರಣೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶ ದಿನಾಂಕ 31-1-2023 ನೇ ಮಂಗಳವಾರ ಭಾರತ್ ಆಡಿಟೋರಿಯಂ ಚಂದಳಿಕೆ ವಿಟ್ಲ ಇಲ್ಲಿ ಪ್ರಗತಿಬಂದು ಸ್ವ- ಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ ಇದರ ಅಧ್ಯಕ್ಷ ನವೀನ್ ಚಂದ್ರ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ ಇಲ್ಲಿನ ಪೂಜ್ಯ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ಗ್ರಾಮ ಅಭಿವೃದ್ಧಿ ಯೋಜನೆಯ ಮೂಲಕ ಸ್ವಾವಲಂಬಿ ಜೀವನದ ನಡೆಸಿ ಸಾರ್ಥಕತೆಯ ಬದುಕು ಕಟ್ಟಲು ಸಾಧ್ಯವಾಗಿದೆ. ಗ್ರಾಮ ಅಭಿವೃದ್ಧಿ ಯೋಜನೆ ಎನ್ನುವುದು ಜಾತಿ ಮೀರಿ ಬೆಳೆದ ಸಂಘಟನೆ ಆಗಿದೆ ಎಂದರು.

ಪುತ್ತೂರು ವಿಧಾನ ಸಭಾ ಕ್ಷೆತ್ರದ ಶಾಸಕ ಸಂಜೀವ ಮಠ0ದೂರು ಕೃಷಿ ಸಲಕರಣೆಗಳನ್ನು ವಿತರಣೆ ಮಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರ ದೂರ ದೃಷ್ಟಿಯ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಗಳು ಧರ್ಮಾಧಿಕಾರಿಗಳು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಇನ್ನಷ್ಟು ಬಲಿಷ್ಠವಾಗಲು ಸಹಕಾರಿಯಾಗಿದೆ. ಯೋಜನೆಯ ಕಾರ್ಯಕ್ರಮಗಳ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಇದರ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ನಾವು ಯಾವುದೇ ಕೆಲಸದಲ್ಲಿ ಇದ್ದರೂ ನಮ್ಮ ಮೂಲ ಕಸುಬು ಕೃಷಿಯನ್ನು ಮರೆಯಬಾರದು ಎಂದು ಅಭಿಪ್ರಾಯ ಭಟ್ಟರು. ಈ ಸಂದರ್ಭದಲ್ಲಿ ಯೋಜನೆಯ ವಿವಿಧ ಅನುದಾನ ಹಾಗೂ ಸೌಲಭ್ಯಗಳನ್ನು ವಿತರಿಸಲಾಯಿತು. ಉತ್ತಮ ಪ್ರಗತಿ ಬಂದು ತಂಡಗಳನ್ನು, ಉತ್ತಮ ಜ್ಞಾನ ವಿಕಾಸ ತಂಡಗಳನ್ನು, ಯೋಜನೆಯ ಮೂಲಕ ಸಹಾಯ ಪಡೆದು ಪ್ರಗತಿ ಸಾಧಿಸಿದ ಉತ್ತಮ ಕೃಷಿಕರನ್ನು, ಉತ್ತಮ ಸ್ವ ಉದ್ಯಮಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಧರ್ಮಸ್ಥಳ ಇದರ ಕೃಷಿ ನಿರ್ದೇಶಕ ಮನೋಜ್ ಮೆನೇಜಸ್,
ಅಖಿಲ ಕರ್ನಾಟಕ ಜನಜಾಗ್ರತಿ ವೇಧಿಕೆ ಬಂಟ್ವಾಳ ತಾಲ್ಲೂಕು ಅಧ್ಯಕ್ಷ ರೋನಾಲ್ಡ್ ಡಿಸೋಜ, ಜನಜಾಗ್ರತಿ ವೇದಿಕೆ ವಿಟ್ಲ ವಲಯ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಇಕೋ ಗ್ಲಾಸ್ ಕಂಪನಿ ಮಾಲಕ ರಾಜಾರಾಮ್ ಸಿ ಜಿ, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬಂಟ್ವಾಳ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಭಾರತ್ ಅಡಿಟೋರಿಯಂ ಮಾಲಕ ಸಂಜೀವ ಪೂಜಾರಿ, ಯೋಜನೆಯ ವಿಟ್ಲ ತಾಲೂಕಿಗೆ ಸಂಬಂಧಪಟ್ಟ ವಲಯ ಜನಜಾಗ್ರತಿ ವೇದಿಕೆಯ ಅಧ್ಯಕ್ಷ ರಾಜರಾಮ ಶೆಟ್ಟಿ, ರಘುರಾಮ ಶೆಟ್ಟಿ, ರೋಹಿತಾಕ್ಷ, ಚಂದ್ರಶೇಖರ್ ಆಳ್ವ, ಅರವಿಂದ ರೈ, ಭಟ್ಯಪ್ಪ ಶೆಟ್ಟಿ, ಬಾಲಕೃಷ್ಣ ಕಾರಂತ್, ಹಾಗೂ ಯೋಜನೆಯ ವಲಯ ಅಧ್ಯಕ್ಷ ಸುಧಾಕರ ಸಪಲ್ಯ, ರಾಬರ್ಟ್ ಪೆರ್ನಾಂಡಿಸ್, ಪ್ರಮೀಳಾ, ರಾಜೇಂದ್ರ ರೈ, ಗಣೇಶ್ ಕರೋಪಾಡಿ, ದಿನೇಶ್ ಶೆಟ್ಟಿ, ತುಳಸಿ ಮೊದಲದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲ್ಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಯೋಜನೆಯ ವಿಟ್ಲ ತಾಲೂಕಿನ ಸಾಧನ ವರದಿಯನ್ನು ವಾಚಿಸಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್(ರಿ) ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕೇಪು ವಲಯ ಮೇಲ್ವಿಚಾರಕ ಜಗದೀಶ್ ವಂದಿಸಿದರು. ರೇಣುಕಾ ಕಾಣಿಯೂರು ಹಾಗೂ ಮಾಣಿ ವಲಯ ಮೇಲ್ವಿಚಾರಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು. ಜನಜಾಗೃತಿ ವೇದಿಕೆಯ ಯೋಜನಾ ಅಧಿಕಾರಿ ತಿಮ್ಮಯ್ಯ ನಾಯ್ಕ್, ವಲಯ ಮೇಲ್ವಿಚಾರಕರು, ಒಕ್ಕೂಟಗಳ ಸೇವಾ ಪ್ರತಿನಿಧಿಗಳು. ಶೌರ್ಯ ತಂಡದ ಸದಸ್ಯರು ಸಹಕರಿಸಿದರು.

- Advertisement -

Related news

error: Content is protected !!