Friday, March 29, 2024
spot_imgspot_img
spot_imgspot_img

ವಿಟ್ಲ: ಸಂಗೀತ ಕಲಾವಿದ ಪ್ರವೀಣ್ ಜಯ ವಿಟ್ಲ ಇವರಿಗೆ “ಸಂಗೀತ ರತ್ನ ರಾಜ್ಯ ಪ್ರಶಸ್ತಿ”

- Advertisement -G L Acharya panikkar
- Advertisement -

ವಿಟ್ಲ: ಸಂಗೀತ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರವೀಣ್ ಜಯ ವಿಟ್ಲ ಇವರಿಗೆ ವಾಷ್ಠರ್ ಫೈವ್ ಸ್ಟಾರ್ ಬಳಗ ಸುಳ್ಯ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ ಉಮಾದೇವಿಯವರು ನ.14 ರಂದು “ಸಂಗೀತ ರತ್ನ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಿದರು.

ಸುಮಾರು 150ಕ್ಕೂ ಅಧಿಕ ಗೀತ ರಚನೆ ಕೆಲವೊಂದು ಹಾಡುಗಳಿಗೆ ಸಂಗೀತ ಸಂಯೋಜನೆ, ಹಲವಾರು ಧ್ವನಿ ಸುರುಳಿಗಳಿಗೆ ಗಾಯನ, ಆಲ್ಬಂ ಸಾಂಗ್‌ಗಳ ನಿರ್ದೇಶನ ಜೊತೆಗೆ ಅಭಿನಯ, ಕಿರುಚಿತ್ರ ನಿರ್ದೇಶನಗಳನ್ನು ಮಾಡಿ ಸಾಧನೆಯ ಮೆಟ್ಟಿಲೇರುತ್ತಿರುವ ನಮ್ಮ ವಿಟ್ಲದ ಹೆಮ್ಮೆಯ ಕಲಾವಿದ ಪ್ರವೀಣ್ ಜಯ ವಿಟ್ಲ.


‘ಸ್ವರಗಂಗಾ’ ಎಂಬ ಮಕ್ಕಳ ಸಂಗೀತ ತಂಡದಲ್ಲಿ ತರಬೇತುದಾರರಾಗಿ ಹಲವಾರು ಪ್ರತಿಭೆಗಳಿಗೆ ನಾನಾ ವೇದಿಕೆಗಳಲ್ಲಿ ಅವಕಾಶ ನೀಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.

“ಸಂಗೀತ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಸಮಾರಂಭದ ವೇದಿಕೆಯಲ್ಲಿ ರಾಜಯೋಗಿನಿ ಉಮಾದೇವಿ ಸಂಚಾಲಕರು ಪ್ರಜಾಪಿತ ಈಶ್ವರೀಯ ವಿಶ್ವ ವಿದ್ಯಾನಿಲಯ ಸುಳ್ಯ, ಎಚ್ ಭೀಮರಾವ್ ವಾಷ್ಠರ್ ಅಧ್ಯಕ್ಷರು ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ, ಕು. ಅನಿತಾ ಲಕ್ಷ್ಮೀ ತಹಶೀಲ್ದಾರರು ಸುಳ್ಯ ತಾಲೂಕು.

vtv vitla
vtv vitla

ನವೀನ್ ಚಂದ್ರ ಜೋಗಿ ಸರ್ಕಲ್ ಇನ್‌ಸ್ಪೆಕ್ಟರ್ ಸುಳ್ಯ, ಮೋಹನ್ ನಂಗಾರು ತಾಂತ್ರಿಕ ಅಧಿಕಾರಿಗಳು ಕೃಷಿ ಇಲಾಖೆ ಸುಳ್ಯ, ಬಿ.ಕೆ ಉಮೇಶ್ ಆಚಾರ್ಯ ಸಹಸಂಚಾಲಕರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!