Wednesday, July 29, 2026
spot_imgspot_img
spot_imgspot_img

ವಿಟ್ಲ: ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ರವರಿಂದ ಶಿಲಾನ್ಯಾಸ

- Advertisement -
- Advertisement -

ವಿಟ್ಲ: ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಟಾಟಾ ಟೆಕ್ನಾಲಾಜೀಸ್ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸಲು ಅನುದಾನದಲ್ಲಿ ನಡೆಯಲಿರುವ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನಡೆಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಇಲ್ಲಿ ನಿರ್ಮಾಣಗೊಳ್ಳುವ ಕಟ್ಟಡ ಕಾಮಗಾರಿಗುಣಮಟ್ಟದಿಂದ ಕೂಡಿರಬೇಕು. ಅತೀ ವೇಗವಾಗಿ ಕಾಮಗಾರಿ ಮುಗಿಸಿ ಹಸ್ತಾಂತರ ಮಾಡಬೇಕು.

ಪುತ್ತೂರಿನಲ್ಲಿ 2 ಐಟಿಐ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದ ಅವರು ವಿಟ್ಲದಲ್ಲಿ ಸದ್ಯದಲ್ಲಿ ನೂತನ ಐಟಿಐ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸದಸ್ಯರಾದ ರಾಮ್ ದಾಸ್ ಶೆಣೈ, ಅರುಣ ಎಂ ವಿಟ್ಲ, ಶ್ರೀಕೃಷ್ಣ, ಕರುಣಾಕರ ನಾಯ್ತೋಟ್ಟು, ಹರೀಶ್ ಪೂಜಾರಿ, ರಮಾನಾಥ ವಿಟ್ಲ, ವೀರಪ್ಪ ಗೌಡ, ಜಗನ್ನಾಥ್ ಸಾಲಿಯಾನ್ ಉಪಸ್ಥಿತರಿದ್ದರು.

- Advertisement -

Related news

error: Content is protected !!