Monday, May 6, 2024
spot_imgspot_img
spot_imgspot_img

ವಿಟ್ಲ: ನಿರ್ಜನ ಪ್ರದೇಶದಲ್ಲಿ ಭಿನ್ನಕೋಮಿನ ಯುವತಿಯರೊಂದಿಗೆ ಮುಸ್ಲಿಂ ಯುವಕ..! ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು…! ಯುವತಿಯರನ್ನು ಪ್ರಜ್ಞಾ ಕೌನ್ಸಿಲಿಂಗ್‌ಗೆ ರವಾನೆ

- Advertisement -G L Acharya panikkar
- Advertisement -

ವಿಟ್ಲ: ಕುಡ್ತಮುಗೇರು ಪಡಾರು ಬೊಳ್ಪಾದೆ ಮೈದಾನ ಗುಡ್ಡದಲ್ಲಿ ಇಬ್ಬರು ಯುವತಿಯರು ಮತ್ತು ಅನ್ಯ ಕೋಮಿನ ಯುವಕನೊಂದಿಗೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಘಟನೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಸಂಘಟನೆಗಳು ಈ ಬಗ್ಗೆ ದೂರು ನೀಡಿವೆ.

ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರೊಂದಿಗೆ ಮುಸ್ಲಿಂ ಯುವಕನಿದ್ದು ಇದರಿಂದ ಸಾರ್ವಜನಿಕರು ಸಂಶಯಗೊಂಡಿದ್ದಾರೆ. ಇದನ್ನು ತಿಳಿದ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮೂವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದು ವಿಚಾರಿಸಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿ ಸಿದ್ಧಿಕ್‌ ಎಂಬಾತ ಅಟೋ ರಿಕ್ಷದಲ್ಲಿ ತಂದು ಬಿಟ್ಟಿರುತ್ತಾನೆ. ಸಿದ್ದಿಕ್‌ನ ನಿಕಟವರ್ತಿ ಆಯಿಷ ಎಂಬ ಮಹಿಳೆ ಇವರನ್ನು ಕರೆದುಕೊಂಡು ಹೋಗಲು ಬಂದಿದ್ದರು. ಈ ಸಂಧರ್ಭದಲ್ಲಿ ಸಂಶಯ ಬಂದಿದ್ದು, ಆಯಿಷಾ ತಮ್ಮ ಮನೆಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆಯಿಷಾ ಎಂಬಾಕೆ ಯುವತಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ಈ ಅನೈತಿಕ ಚಟುವಟಿಕೆಗೆ ಭಾಗಿಯಾಗುವಂತೆ, ಕುಮ್ಮಕ್ಕು ನೀಡುತ್ತಿರುವ ವಿಷಯ ಗಮನಕ್ಕೆ ಬಂದಿರುವುದು ಹಾಗೂ ಸಿದ್ದಿಕ್ ಗಾಂಜಾ ವ್ಯವಹಾರ ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ಆಯಿಷಾ ಮನೆಗೆ ಸಂಶಯಾಸ್ಪದವಾದ ಕೇರಳ ನೋಂದಾವಣಿಯ ವಾಹನಗಳು ಬರುತ್ತಿದೆ. ಇಂದು ಸಿಕ್ಕ ಇಬ್ಬರು ಯುವತಿಯರನ್ನು ಮತ್ತು ಕರೆ ತಂದ ಯುವಕ ಅನೈತಿಕ ಚಟುವಟಿಕೆಗೆ ಕರೆ ತಂದಿರುವುದು ಬಲವಾದ ಸಂಶಯ ಇದೆ. ಆದ್ದರಿಂದ ಇಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಶಾಂತಿ, ನೆಮ್ಮದಿ, ಭಂಗವಾಗಿರುತ್ತಿದ್ದು, ಇದೆ ರೀತಿ ಮುಂದುವರಿದಲ್ಲಿ ಈ ಪ್ರದೇಶ ಶಾಂತಿ ಕದಡುವ ಸಾಧ್ಯತೆ ಇದ್ದು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಇವತ್ತು ಸಿಕ್ಕ ಇಬ್ಬರು ಯುವತಿಯರನ್ನು ಮತ್ತು ಯುವಕನನ್ನು ವಿಚಾರಿಸಿ, ಸಿದ್ದಿಕ್ ಮತ್ತು ಆಯಿಷಾ ಇವರಿಗೆ ಮತ್ತು ಇವತ್ತು ಸಿಕ್ಕವರ ಜೊತೆ ಇರುವ ಸಂಪರ್ಕವನ್ನು ವಿಚಾರಿಸಿ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇಬ್ಬರು ಯುವತಿಯರನ್ನು ಮಂಗಳೂರಿನ ಪ್ರಜ್ಞಾ ಆಶ್ರಯಮಕ್ಕೆ ಕೌನ್ಸಿಲಿಂಗ್‌ಗೆ ಕರೆದೊಯ್ದಿದ್ದು, ಯುವಕನನ್ನು ಪೊಲೀಸ್ ವಶದಲ್ಲಿ ಇರಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!