Wednesday, April 24, 2024
spot_imgspot_img
spot_imgspot_img

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ SSLC ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ದಿನಾಂಕ 27/೦5/2022ರಂದು ಸೈಂಟ್ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಟ್ಲ ಇಲ್ಲಿ ಹತ್ತನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥ ಫಾ. ಸುನಿಲ್ ಪ್ರವೀಣ್ ಪಿಂಟೋ ಎಲ್ಲರನ್ನು ಸ್ವಾಗತಿಸಿ ಮಾತನಾಡಿದರು. ನಮ್ಮ ಪ್ರಯತ್ನಕ್ಕೆ ಸಂದ ಪುರಸ್ಕಾರ ಇದಾಗಿದ್ದು ವಿದ್ಯಾರ್ಥಿಗಳ ಈ ಸಾಧನೆ ನಮಗೆ ತುಂಬಾ ಸಂತೋಷ ನೀಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಸಾಧನೆಗೈದ ಕ್ರಿಸ್ಟಲ್ ಜ್ಯೋತಿ ಲೋಬೋ, ಪ್ರಣಮ್ಯ ಬಿ ಶೆಟ್ಟಿ, ಆರ್ ವಿ ಭುವನ್, ತನಿಷ ಮಿನೇಜಸ್ , ಜೆನಿಶಾ ಪಿಂಟೋ , ಅನುಷಾ ಶಾಲೆಟ್, ವಸುಂದರ ಗಣೇಶ್, ಯುವರಾಜ್ ಎಸ್ ನಾಯ್ಕ, ಅನುಪಮಾ ಪೂರ್ತಿ ಇವರನ್ನು ಸನ್ಮಾನಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳ ಪೈಕಿ ಕ್ರಿಸ್ಟಲ್ ಜ್ಯೋತಿ ಲೋಬೋ ಹಾಗೂ ಪ್ರಣಮ್ಯ ಬಿ ಶೆಟ್ಟಿ,ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಸಾಧನೆಗೆ ಸಹಕಾರವಿತ್ತ ಶಿಕ್ಷಕರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶಾಲಾ ಸಂಚಾಲಕ ಫಾ! ಐವನ್ ಮೈಕಲ್ ರೋಡ್ರಿಗಸ್ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ನಮಗೆಲ್ಲ ಸ್ಫೂರ್ತಿ ಶಿಕ್ಷಕರ ಪರಿಶ್ರಮವೇ ಇದಕ್ಕೆ ಕಾರಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದು, ಶಿಕ್ಷಕಿ ಸಂಧ್ಯಾ ಎಂ ಡಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಿಜಯಲಕ್ಷ್ಮಿ ಇವರು ವಂದಿಸಿದರು.

- Advertisement -

Related news

error: Content is protected !!