Friday, May 17, 2024
spot_imgspot_img
spot_imgspot_img

ವಿಟ್ಲ: 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಕೇಪು ಗ್ರಾಮ ಪಂಚಾಯತ್ ಹಾಗೂ ಸೇವಾ ಸಹಕಾರಿ ಬ್ಯಾಂಕ್ ಪುಣಚ, ಹಾಲು ಉತ್ಫಾದಕರ ಸಹಕಾರಿ ಸಂಘ ನೀರ್ಕಜೆ, ಇದರ ಸಹಯೋಗದೊಂದಿಗೆ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ದಿನಾಂಕ: 13-08-2022 ರಿಂದ15-08-2022ರ ವರೆಗೆ ಕೇಪು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ದಿನಾಂಕ: 13.08.2022ನೇ ಶನಿವಾರದಂದು ದ.ಕ.ಜಿ.ಪ.ಹಿ.ಪ್ರಾ ನೀರ್ಕಜೆ ಶಾಲಾ ಕ್ರೀಡಾಂಗಣದಲ್ಲಿ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಮತ್ತು ಫ್ರೌಢ ಶಾಲಾ ವಿದ್ಯಾರ್ಥಿಗಳ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ನೆರವೇರಿಸಲಿದ್ದು, ಗೌರವ ಉಪಸ್ಥಿತಿಯನ್ನು ಕೇಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಘವ ಎಸ್ ಸಾರಡ್ಕ, ದ.ಕ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ ಪಿ ವಹಿಸಲಿದ್ದಾರೆ.

ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯು ಪೂರ್ವಾಹ್ನ 10ರಿಂದ ಅಪರಾಹ್ನ 4.30ತನಕ ನಡೆಯಲಿದ್ದು, ಇದರ ಬಹುಮಾನದ ಪ್ರಾಯೋಜಕತ್ವವನ್ನು LIC ಆಫ್ ಇಂಡಿಯಾ ಮಂಗಳೂರು ಇದರ ಜಗಜ್ಜೀವನ್ ರಾಮ್ ಶೆಟ್ಟಿ ವಹಿಸಿಕೊಂಡಿದ್ದಾರೆ.

ದಿನಾಂಕ: 14-08-2022ರಂದು ಬೆಳಿಗ್ಗೆ 9.30ರಿಂದ ಕೇಪು ಗ್ರಾಮ ಪಂಚಾಯತ್‌ ಸದಸ್ಯರು, ಸಿಬ್ಬಂದಿಗಳು ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರುಗಳಿಗೆ ಆಟೋಟ ಸ್ಫರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಪು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ರಾಘವ ಎಸ್‌.ಸಾರಡ್ಕ ಮಾಡಲಿದ್ದಾರೆ. ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ತಾಲೂಕು ಪಂಚಾಯತ್‌ ಬಂಟ್ವಾಳ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಬಾಗವಹಿಸಲಿದ್ದಾರೆ.

ದಿನಾಂಕ 15ರಂದು ಬೆಳಿಗ್ಗೆ 9.00 ಗಂಟೆಗೆ ಧ್ವಜಾರೋಹಣ ನಂತರ ಬೆಳಿಗ್ಗೆ10.30ರಿಂದ ಮಧ್ಯಾಹ್ನ3.00 ಗಂಟೆಯವರೆಗೆ ಜಿಲ್ಲಾ ಆಸ್ಪತ್ರೆ ವೆನ್‌ಲಾಕ್‌ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಯನಡ್ಕ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಮತ್ತು ಅಂಗಾಂಗ ದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಪು ಗ್ರಾಂ ಪಂಚಾಯತ್‌ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಮಾಡಲಿದ್ದಾರೆ.

- Advertisement -

Related news

error: Content is protected !!