Saturday, May 4, 2024
spot_imgspot_img
spot_imgspot_img

ವಿಟ್ಲ: SDPI ಅಳಿಕೆ ಗ್ರಾಮ ಸಮಿತಿ ವತಿಯಿಂದ ಹಿಜಾಮ ಹಾಗೂ ಅಕ್ಯುಪಂಕ್ಚರ್ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಳಿಕೆ ಗ್ರಾಮ‌‌ ಸಮಿತಿ ವತಿಯಿಂದ ಹಿಜಾಮ ಹಾಗೂ ಅಕ್ಯುಪಂಕ್ಚರ್ ಕಾರ್ಯಕ್ರಮ ಅಳಿಕೆ ಪಂಚಾಯತ್ ಸಭಾ ಭವನದಲ್ಲಿ SDPI ಅಳಿಕೆ ಗ್ರಾಮ ಸಮಿತಿ ಅಧ್ಯಕ್ಷ ಅಶ್ರಫ್ ಪುಲಿಂಜಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಾ|ಸರಫುದ್ದೀನ್ ಪೈಯ್ಯಣ್ಣೂರ್ ಮಾತನಾಡಿ ಹಿಜಾಮ ಚಿಕಿತ್ಸೆಯಿಂದ ಲಭಿಸುವ ಪ್ರಯೋಜನದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಸುಮಾರು ಐವತ್ತಕ್ಕಿಂತ ಹೆಚ್ಚು ಜನ ಈ ಒಂದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ವಿಧಾನಸಭಾ ಸಮಿತಿ ಸದಸ್ಯ ಪಿ.ಬಿ.ಕೆ ಮಹಮ್ಮದ್, ನಝೀರ್ ಪೈಸಾರಿ, SDPI ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಸಿದ್ದಿಕ್, ಶಾಫಿ ಮಳಿಗೆ, ಅಳಿಕೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಬೈರಿಕಟ್ಟೆ, ವಿಟ್ಲ ಬ್ಲಾಕ್ ಅಧ್ಯಕ್ಷ ಬದ್ರುದ್ದೀನ್ ಪೈಸಾರಿ.

ಅಳಿಕೆ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ವಕೀಲರು, ಪಂಚಾಯತ್ ಸದಸ್ಯರಾದ ಸದಾಶಿವ ಶೆಟ್ಟಿ, ಅಶ್ರಫ್ ಅಳಿಕೆ, ಮಹಮ್ಮದ್ ಅಳಿಕೆ ಹಾಗೂ ಸಲಾಮ್ ಮದನಿ, ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು. SDPI ಪುತ್ತೂರು ವಿಧಾನಸಭಾ ಸಮಿತಿ ಸದಸ್ಯರಾದ ಅನ್ವರ್ ಪೆರುವಾಯಿ ಸ್ವಾಗತಿಸಿ,ಸಾಹಿಲ್ ಪಡೀಲ್ ಧನ್ಯವಾದ ಗೈದರು.ಸಿಹಾಬ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

driving
- Advertisement -

Related news

error: Content is protected !!