Monday, August 31, 2026
spot_imgspot_img
spot_imgspot_img

ವಿವಾಹಿತ ಸ್ನೇಹಿತನೊಂದಿಗೆ ಹೊಟೇಲ್‍ನಲ್ಲಿ ತಂಗಿದ್ದ ಯುವತಿ ನಿಗೂಢ ಸಾವು

- Advertisement -
- Advertisement -
vtv vitla
vtv vitla

ತಿರುವನಂತಪುರಂ: ವಿವಾಹಿತ ಸ್ನೇಹಿತನೊಂದಿಗೆ ಹೊಟೇಲ್‍ ನಲ್ಲಿ ತಂಗಿದ್ದ ಯುವತಿ ನಿಗೂಢ ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ.

ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ ಗಾಯತ್ರಿ 23 ನಿಗೂಢವಾಗಿ ಮೃತಪಟ್ಟ ಯುವತಿಯಾಗಿದ್ದಾಳೆ. ಈಕೆ ಪರವೂರು ಮೂಲದ ಪ್ರವೀಣ್ ಜೊತೆ ತಂಪನೂರಿನಲ್ಲಿರುವ ಹೊಟೇಲ್‍ನಲ್ಲಿ ತಂಗಿದ್ದಳು. ಶನಿವಾರ ತಡರಾತ್ರಿ ಹೊಟೇಲ್‍ ರೂಮ್‍ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾಳೆ. ಆಕೆಯ ಜೊತೆಗಿದ್ದ ಪ್ರವೀಣ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

vtv vitla
vtv vitla

ಶನಿವಾರ ಮಧ್ಯಾಹ್ನ ಇಬ್ಬರೂ ಹೊಟೇಲ್‍ನಲ್ಲಿ ರೂಂ ಮಾಡಿಕೊಂಡಿದ್ದರು. ಹೊಟೇಲ್ ಸಿಬ್ಬಂದಿಗೆ ಪ್ರವೀಣ್‍ ನಿಂದ ಕರೆ ಬಂದಿದ್ದು, ಮಧ್ಯರಾತ್ರಿಯ ವೇಳೆಗೆ ತನ್ನ ಗೆಳತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಅಷ್ಟರಲ್ಲಿ ಆ ವ್ಯಕ್ತಿ ಹೊಟೇಲ್‌ನಿಂದ ನಾಪತ್ತೆಯಾಗಿದ್ದಾರೆ. ಇವರಿಬ್ಬರು ನಗರದ ಆಭರಣ ಮಳಿಗೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಾಹಿತನಾಗಿರುವ ಪ್ರವೀಣ್, ಗಾಯತ್ರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪ್ರವೀಣ್ ಕುಟುಂಬದಲ್ಲಿ ಗಲಾಟೆಯಾಗಿತ್ತು. ಇದರಿಂದ ಮನನೊಂದು ಗಾಯತ್ರಿ ವಿಷ ಸೇವಿಸಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!