Monday, November 16, 2026
spot_imgspot_img
spot_imgspot_img

ವೀರಕಂಭ: ಮಜಿ ಶಾಲೆಯಲ್ಲಿ 2021-22ನೇ ಸಾಲಿನ ಎರಡನೇ ಹಂತದ SDMC ಮತ್ತು ಪೋಷಕರ ಸಭೆ

- Advertisement -
- Advertisement -

ದ.ಕ‌.ಜಿ‌.ಪಂ.ಹಿ‌ಪ್ರಾ.ಶಾಲೆ. ಮಜಿ, ವೀರಕಂಭ ಇಲ್ಲಿ 2021-22 ನೇ ಸಾಲಿನ ಎರಡನೇ ಹಂತದ ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಭೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಸಂಜೀವ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

vtv vitla

ವಿಟ್ಲ ಆರಕ್ಷಕ ಠಾಣೆಯ ಠಾಣಾಧಿಕಾರಿ ಶ್ರೀಯುತ ಸಂದೀಪ್ ಕುಮಾರ್ ಶೆಟ್ಟಿ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲಾ ವಿಧ್ಯಾಥಿ೯ಗಳಿಗೆ ಮತ್ತು ಪೋಷಕರಿಗೆ ರಸ್ತೆ ಸುರಕ್ಷತೆ, ಪರವಾನಿಗೆ, ಮಕ್ಕಳ ಅಪಹರಣ, ಮಕ್ಕಳಲ್ಲಿ ಜಾಗ ರೂಕತೆ, ಪೋಷಕರ ಜವಾಬ್ದಾರಿ, ಸೈಬರ್ ಅಪರಾಧ ಮತ್ತು ತಮ್ಮ ಆಸಕ್ತಿ ದಾಯಕ ವಿಷಯದಲ್ಲಿ ಕಲಿಯುವ ಬಗ್ಗೆ ಮಾಹಿತಿಯನ್ನು ನೀಡಿದರು.

ಇನ್ನೋವ೯ ಪ್ರೊಪೇಷನರಿ ಸಬ್ಇನ್ಸ್ಪೆಕ್ಟರ್ ಶ್ರೀ ಮಂಜುನಾಥ್ ರವರು ಪೋಲಿಸ್ ಇಲಾಖೆಯ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಪೋಷಕರಿಗೆ ಶಿಕ್ಷಕಿ ಮುಷೀ೯ದಾ ಬಾನುರವರು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಬಗ್ಗೆ. ಮತ್ತು ಶಿಕ್ಷಕಿ ಅನುಷಾರವರು ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಅಭಿವೃದ್ಧಿ ಯ ಬಗ್ಗೆ, ಇಲಾಖೆಯ ಹೊಸ ಕಾಯ೯ಕ್ರಮ ಓದು ಕನಾ೯ಟಕದ ಬಗ್ಗೆ ಮಾಹಿತಿ ನೀಡಿದರು.

vtv vitla
vtv vitla

ಕಾಯ೯ಕ್ರಮದ ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ಜಯಂತಿ, ಹಳೆ ವಿಧ್ಯಾರ್ಥಿ ಸಂಘದ ಅದ್ಯಕ್ಷ ರಮೇಶ್ ಗೌಡ ಮೈರಾ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ ಎಂ,. ಶಾಲಾ ನಾಯಕಿ ಕುಮಾರಿ ಶ್ರೇಯ.ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮಕ್ಕಳ ಪೋಷಕರು ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಮಖ್ಯ ಶಿಕ್ಷಕ ನಾರಾಯಣ ಪೂಜಾರಿ ಯವರು ಸ್ವಾಗತಿಸಿ, ಶಿಕ್ಷಕಿ ಸಂಗೀತ ಶಮ೯ರವರು ಧನ್ಯವಾದ ವಿತ್ತು ಕಾರ್ಯಕ್ರಮ ನಿರ್ವಹಿಸಿದ್ದರು.

vtv vitla
vtv vitla
- Advertisement -

Related news

error: Content is protected !!