Sunday, May 5, 2024
spot_imgspot_img
spot_imgspot_img

ಶಾಲೆಯಲ್ಲೇ ಆರು ವರ್ಷದ ಬಾಲಕಿ ಮೇಲೆ ರೇಪ್: ಶಿಕ್ಷಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

- Advertisement -G L Acharya panikkar
- Advertisement -

ಬೆಂಗಳೂರು: ಶಾಲೆ ಆವರಣದಲ್ಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾನಗರದ ಖಾಸಗಿ ಶಾಲೆಯೊಂದರ ಶಿಕ್ಷಕನಿಗೆ ಬೆಂಗಳೂರು ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇಂದಿರಾನಗರದ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಬೋಧಿಸುತ್ತಿದ್ದ ಹಳೆ ತಿಪ್ಪಸಂದ್ರ ನಿವಾಸಿ ಜಯಶಂಕರ್ (46) ಎಂಬ ಶಿಕ್ಷಕನಿಗೆ ಈ ಶಿಕ್ಷೆ ವಿಧಿಸಲಾಗಿದೆ.

2014ರ ಅಕ್ಟೋಬರ್ 28 ರಂದು ಶಾಲೆಯಿಂದ ಮನೆಗೆ ಮರಳಿದ್ದ ಬಾಲಕಿ ತನ್ನ ಖಾಸಗಿ ಭಾಗಗಳಲ್ಲಿ ನೋವಾಗುತ್ತಿರುವ ಬಗ್ಗೆ ತನ್ನ ತಾಯಿಗೆ ಹೇಳಿಕೊಂಡಿದ್ದಳು. ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು. ಘಟನೆ ನಡೆದ ಮರುದಿನ ಮಗುವಿನ ತಾಯಿ ಶಾಲೆಗೆ ತೆರಳಿ, ಈ ಬಗ್ಗೆ ಶಿಕ್ಷಕರಿಂದ ವಿವರಣೆ ಕೇಳಿದ್ದರು. ಆದರೆ ಶಾಲಾ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಬಳಿಕ ತಾಯಿ ಘಟನೆ ಕುರಿತಂತೆ ಜೀವನ್ ಬಿಮಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ (Sec 376 of IPC relates to rape and Sections 4 and 6 of POCSO Act) ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು 2014ರ ಅಕ್ಟೋಬರ್ 30 ರಂದು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿ ಶಿಕ್ಷಕ ಬಾಲಕಿಯನ್ನು ಮಧ್ಯಾಹ್ನದ ಊಟದ ವೇಳೆ ಶಾಲೆಯ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿತ್ತು.

- Advertisement -

Related news

error: Content is protected !!