Monday, May 6, 2024
spot_imgspot_img
spot_imgspot_img

ಶಾಸಕ ಪ್ರಿಯಾಂಕ ಖರ್ಗೆ ಶೂಟ್‌ ಬೆದರಿಕೆ; ಬಿಜೆಪಿ ಮುಖಂಡನ ಬಂಧನ

- Advertisement -G L Acharya panikkar
- Advertisement -
vtv vitla

ಕಲಬುರಗಿ: ಚಿತ್ತಾಪುರದಲ್ಲಿ ಪೇಸಿಎಂ ಪೋಸ್ಟರ್ ವಾರ್ ತಾರಕಕ್ಕೇರಿದು ಶಾಸಕ ಪ್ರಿಯಾಂಕ್‌ ಖರ್ಗೆರನ್ನ ಶೂಟ್ ಮಾಡಲು ಸಿದ್ಧ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ರನ್ನ ಪೊಲೀಸರು ಬಂಧಿಸಿದ್ದಾರೆ.

ಮಣಿಕಂಠ ರಾಠೋಡ್ ಹೇಳಿಕೆ ಹಿನ್ನಲೆಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ಮಣಿಕಂಠ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.

ಭಾನುವಾರ ಮಧ್ಯರಾತ್ರಿ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿ ಕಲಬುರಗಿಗೆ ಕರೆ ತಂದಿದ್ದಾರೆ. ಕಲಬುರಗಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ನಾಯಕರು ತಿರುಗಾಡಲು ಬಿಡುವುದಿಲ್ಲ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದರು.

ಭಾರತ ದೇಶ ಉಳಿಸಲು ಮಿಲಿಟರಿ ಸೈನಿಕರು ಗಡಿಗಳಲ್ಲಿ ಹೇಗೆ ನಿಂತಿದ್ದಾರೋ ಅದೇ ರೀತಿ ನಾವು ಸಹ ಸಮಾಜ ಮತ್ತು ಬಡವರ ಸಲುವಾಗಿ ಮಿಲಿಟರಿಯಂತೆಯೇ ನಿಂತಿದ್ದೇವೆ. ಪ್ರಿಯಾಂಕ್ ಖರ್ಗೆ ನಮ್ಮ ಮೇಲೆ ಗುಂಡು ಹೊಡೆದ್ರೂ ನಾವು ಎದುರಿಸಲು ಸಿದ್ಧರಿದ್ದೇವೆ. ಅವರನ್ನು ಶೂಟ್ ಮಾಡಲೂ ಸಿದ್ದ ಎಂದಿದ್ದರು.

ಮಣಿಕಂಠ ಬಂಧನಕ್ಕಾಗಿ ಕಾಂಗ್ರೆಸ್ ಕೂಡ ಆಗ್ರಹಿಸಿತ್ತು. ಕಲಬುರಗಿ ಎಸ್ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಇಂದು ಕಲಬುರಗಿಗೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡೋದಾಗಿ ಎಚ್ಚರಿಕೆ ನೀಡಿತ್ತು.

- Advertisement -

Related news

error: Content is protected !!