Friday, April 26, 2024
spot_imgspot_img
spot_imgspot_img

ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ ಎಂಟನೇ ವರ್ಷದ ವಾರ್ಷಿಕೋತ್ಸವ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ ಎಂಟನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ. 27ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ವಾರ್ಷಿಕೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಮತ್ತು ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಸಭಾಕಾರ್ಯಕ್ರಮದ ಅಧ್ಯಕರಾಗಿ ಶ್ರೀ ಹರಿಕೃಷ್ಣ ಬಂಟ್ವಾಳ (ಅಧ್ಯಕ್ಷರು, ಕಿಯೋನಿಕ್ಸ್ – ಕರ್ನಾಟಕ ಸರ್ಕಾರ), ಅತಿಥಿಗಳಾಗಿ ಶ್ರೀ ಯೋಗೀಶ್ ಕುಡ್ವ (ಕುಡ್ವ ಮನೆತನ) ಶ್ರೀ ಕೇಶವ ಎ (ಎಸ್.ಆರ್.ಕೆ. ಲ್ಯಾಡರ್ ಪುತ್ತೂರು) ಶ್ರೀ ಎಂ. ಸುಧೀರ್ ಕುಮಾರ್ ಶೆಟ್ಟಿ ( ಅಧ್ಯಕ್ಷರು, ಇಡ್ಕಿದು ಗ್ರಾಮ ಪಂಚಾಯತ್) ಶ್ರೀ ಜಯಪ್ರಕಾಶ್ ನಾಯಕ್ ಎನ್ (ಅಧ್ಯಕ್ಷರು, ವಿಟ್ಲಮುಡ್ನೂರು ಗ್ರಾಮ ಪಂಚಾಯತ್) ಶ್ರೀ ರಾಧಾಕೃಷ್ಣ ಕಂಪ (ಹೆಡ್ ಕಾನ್ಸ್ ಟೇಬಲ್ ಬಂಟ್ವಾಳ ಪೋಲಿಸ್ ಠಾಣೆ) ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು (ಗೌರವಾಧ್ಯಕ್ಷರು ಶ್ರೀ ವಿಷ್ಣುಮೂರ್ತಿ ಯುವಕವೃಂದ ವಿಷ್ಣುನಗರ ಕುಂಡಡ್ಕ) ಆನಂದ ಮಾನಾಜೆಮೂಲೆ (ಅಧ್ಯಕ್ಷರು ಶ್ರೀ ವಿಷ್ಣುಮೂರ್ತಿ ಯುವಕವೃಂದ ವಿಷ್ಣುನಗರ ಕುಂಡಡ್ಕ), ಜಿತೇಶ್ ಕೊಲ್ಯ (ಕಾರ್ಯದರ್ಶಿ, ಶ್ರೀ ವಿಷ್ಣುಮೂರ್ತಿ ಯುವಕವೃಂದ ವಿಷ್ಣುನಗರ ಕುಂಡಡ್ಕ) ಹಾಗೂ ಯುವಕವೃಂದದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ಶ್ರೀ ಆನಂದ ಪುರುಷ ಮಾಣಿಬೆಟ್ಟು (ದೈವಸ್ಥಾನದ ಚಾಕರಿ ವರ್ಗ), ಕು| ವನಿತಾ ಮಾರ್ಪು (ವಿಧ್ಯಾಭ್ಯಾಸ), ಶ್ರೀ ಅಶೋಕ್ ಮಾಡತ್ತಾರು (ಮಾಜಿ‌ ಸೈನಿಕರು), ಶ್ರೀ ನಾರಾಯಣ ನಾಯ್ಕ್ ಮುದಲೆಗುಂಡಿ (ಮೋಕ್ಷಧಾಮ ನಿರ್ವಹಕರು) ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ, ಶ್ರೀ ವಿನೋದ್ ವಿಷ್ಣುನಗರ ನಿರೂಪಿಸಿ, ಮನೋಜ್ ಕಂಪ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು, ಮಂಜೇಶ್ವರ ಇವರಿಂದ ‘ಮಲ್ಲ ಸಂಗತಿಯೇ ಅತ್ತ್’ ತುಳು ಹಾಸ್ಯಮಯ ನಾಟಕ ನಡೆಯಿತು.

- Advertisement -

Related news

error: Content is protected !!