Tuesday, April 23, 2024
spot_imgspot_img
spot_imgspot_img

ಸಂಗಾತಿಯನ್ನು ಕಳೆದುಕೊಂಡು ಮರುಗುತ್ತಿರುವ ನವಿಲು

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣದಲ್ಲಿ ಕೇವಲ ತಮಾಷೆ, ಹೊಸ ವಿಚಾರಗಳು ಮಾತ್ರವಲ್ಲದೆ ಮನಕಲಕುವ, ಹೃದಯಸ್ಪರ್ಶಿ ವಿಡಿಯೋಗಳೂ ಕೂಡ ವೈರಲ್​ ಆಗುತ್ತವೆ. ಇದೀಗ ಇಲ್ಲೊಂದು ನವಿಲು ಸಾವನ್ನಪ್ಪಿದ ಸಂಗಾತಿಯನ್ನು ಕಳುಹಿಸಿ ಕೊಡಲು ವೇದನೆ ಪಡುತ್ತಿರುವ ವಿಡಿಯೋ ನೆಟ್ಟಿಗರನ್ನು ಮನಕಲಕುವಂತೆ ಮಾಡಿದೆ. ಈ ಘಟನೆ ರಾಜಸ್ಥಾನದ ಕುಚೇರಾ ನಗರದಲ್ಲಿ ನಡೆದಿದೆ.

ಸಾಮಾನ್ಯವಾಗಿ ನವಿಲುಗಳು ಒಂದೇ ಸಂಗಾತಿಯೊಂದಿಗೆ ಬದುಕುವುದಿಲ್ಲ. ಆದರೆ ಇಲ್ಲೊಂದು ನವಿಲು ನಾಲ್ಕು ವರ್ಷ ತನ್ನೊಟ್ಟಿಗೆ ಇದ್ದ ಸಂಗಾತಿಯನ್ನು ಕಳೆದುಕೊಂಡು ನೋವು ಪಡುತ್ತಿದೆ. ಸದ್ಯ ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.

vtv vitla

ವೀಡಿಯೋದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ನವಿಲನ್ನು ಎರಡು ಬದಿಗಳಲ್ಲಿ ಹಿಡಿದು ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಲು ಹೋಗುತ್ತಿರುತ್ತಾರೆ. ಆದರೆ ಇನ್ನೊಂದು ನವಿಲು ಹಿಂದಿನಿಂದ ಅವರ ಹಿಂದೆಯೇ ಓಡುತ್ತಿರುವುದನ್ನು ಕಾಣಬಹುದು. ಈ ಮನಕಲಕುವ ವೀಡಿಯೋವನ್ನು ರಾಜಸ್ಥಾನದ ಅರಣ್ಯ ಅಧಿಕಾರಿ ಪರ್ವೀಣ್​ ಕಸ್ವಾನ್​ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ನವಿಲು ತನ್ನ ಸಂಗಾತಿಯಿಂದ ದೂರವಾಗಿರುವುದಕ್ಕೆ ರೋಧಿಸುತ್ತಿದೆ. ಸಂಗಾತಿಯಿಂದ ದೂರವಾಗಲು ಯಾರೂ ಇಷ್ಟಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!