Thursday, October 8, 2026
spot_imgspot_img
spot_imgspot_img

ಸವಣೂರು: ಕೆರೆಗೆ ಬಿದ್ದು ಯುವಕ ಮೃತ್ಯು

- Advertisement -
- Advertisement -

ಸವಣೂರು: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಕಂಪ ಎಂಬಲ್ಲಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕುದ್ಮಾರು ಗ್ರಾಮದ ಕುಂಞ ಎಂಬವರ ಮಗ ನವೀನ್ (27) ಎಂಬಾತನೇ ಮೃತ ಯುವಕ.

ನವೀನ್ ಸವಣೂರು ಗ್ರಾಮದ ಕಂಪ ಎಂಬಲ್ಲಿ ಪ್ರವೀಣ್ ನಾಯಕ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಜು.23ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಹುಡುಕಾಟ ನಡೆಸಿದ್ದಾರೆ.

ಜು.24ರಂದು ಪ್ರವೀಣ್ ನಾಯಕ್ ರವರ ತೋಟದ ಮಧ್ಯೆ ಇರುವ ಕೆರೆಯಲ್ಲಿ ನವೀನ್ ಧರಿಸುವ ಚಪ್ಪಲಿ ಕಂಡುಬಂದಿದ್ದು ಬಳಿಕ ಅಗ್ನಿಶಾಮಕದಳದವರನ್ನು ಕರೆಸಿ ಹುಡುಕಾಟ ನಡೆಸಿದಾಗ ನೀರಿನಾಳದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!