Friday, April 19, 2024
spot_imgspot_img
spot_imgspot_img

ಸಾಲು ಮರದ ತಿಮ್ಮಕ್ಕನ ಪುತ್ರ ನೆಟ್ಟ ಗಿಡಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

- Advertisement -G L Acharya panikkar
- Advertisement -

ಬೇಲೂರು: ಯಗಚಿ ಜಲಾಶಯದ ಸಮೀಪ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಸಾವಿರಾರು ಗಿಡಗಳು ಸುಟ್ಟು ಹೋಗಿವೆ. ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ಅವರು ನೂರಾರು ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೂರಾರು ಎಕರೆ ಪ್ರದೇಶ ಸುಟ್ಟು ಹೋಗಿದೆ.

ಸ್ಥಳಕ್ಕೆ ಬಂದ ಉಮೇಶ್ ಹಾಗೂ ಸ್ನೇಹಿತರಾದ ನಂಜುಂಡಿ, ಶರತ್ ಬೆಂಕಿ ನಂದಿಸಲು ಹರಸಾಹಸಪಟ್ಟರು. ನಂತರ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಬೆಂಕಿ ನಂದಿಸಲಾಯಿತು. ‘ಯಗಚಿ ಜಲಾಶಯ ಯೋಜನೆಗೆ ಸೇರಿದ ಅಣೆಕಟ್ಟೆಯ ಮುಂಭಾಗ ಮತ್ತು ಅಕ್ಕಪಕ್ಕದ ನೂರಾರು ಎಕರೆ ಜಾಗದಲ್ಲಿ 2013ರಿಂದ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು, ಪೋಷಿಸುತ್ತಿದ್ದೆ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿದ್ದಾರೆ. ಗಿಡಗಳು ಬೆಂಕಿಗೆ ಅಹುತಿಯಾಗಿವೆ’ ಎಂದು ಹೇಳಿದ್ದಾರೆ.

- Advertisement -

Related news

error: Content is protected !!