Monday, June 15, 2026
spot_imgspot_img
spot_imgspot_img

ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ಯುವಕನಿಗೆ ಹಲ್ಲೆ ಆರೋಪ; ಪೊಲೀಸ್‌ ಸಿಬ್ಬಂದಿ ಕಡಬ ಠಾಣೆಗೆ ವರ್ಗಾವಣೆ

- Advertisement -
- Advertisement -

ಕಡಬ: ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಕಡಬ ಯುವಕನಿಗೆ ಹಲ್ಲೆ ಗೈದಿದ್ದಾರೆಂದು ಆರೋಪ ಹೊತ್ತಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕಡಬ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಅಂತರಿಕ ತನಿಖೆ ನಡೆಸಿದ್ದು, ಯುವಕನಿಗೆ ಹಲ್ಲೆ ನಡೆಸಿದ್ದಾಗಿ ಆರೋಪ ಹೊತ್ತಿರುವ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ಬಿರಾದಾರ ಎಂಬವರನ್ನು ಕಡಬ ಠಾಣೆಗೆ ವರ್ಗಾಯಿಸಲಾಗಿದೆ.

ಸುಬ್ರಹ್ಮಣ್ಯ ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ತನ್ನಲ್ಲಿ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ಹಣ ಕೇಳಿದ್ದು, ಕೊಡದೇ ಇದ್ದಾಗ ಪೊಲೀಸ್ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆಂದು ಕುಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿಯುವಕ ಶಶಿಕಿರಣ್ ಆರೋಪಿಸಿದ್ದರು. ಅವರು ಈ ಕುರಿತು ದೂರನ್ನೂ ನೀಡಿದ್ದರು.

ಈ ಘಟನೆ ಬೆನ್ನಲ್ಲೇ ಚಿತ್ರದುರ್ಗ ಮೂಲದ ಭೀಮಣ್ಣ ಗೌಡ ಬಿರಾದಾರರನ್ನು ಸುಬ್ರಹ್ಮಣ್ಯದಿಂದ ಕಡಬ ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!