Thursday, April 25, 2024
spot_imgspot_img
spot_imgspot_img

ಸುರತ್ಕಲ್‌ ಟೋಲ್‌ಗೇಟ್‌ ಹೆಜಮಾಡಿ ಟೋಲ್‌ ಜೊತೆ ವಿಲೀನ; ವಾಹನ ಸವಾರರು ಡಬಲ್‌ ಶುಲ್ಕ ತೆರಬೇಕಾಗುತ್ತ..?

- Advertisement -G L Acharya panikkar
- Advertisement -

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ. 11ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ನಂತೂರಿನಿಂದ ಸುರತ್ಕಲ್ ವರೆಗಿನ ರಸ್ತೆಯ ಟೋಲ್‌ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶ ನೀಡಿದೆ.

ತಲಪಾಡಿಯಿಂದ ಕುಂದಾಪುರದವರೆಗಿನ ರಸ್ತೆಯನ್ನು ನವಯುಗ ಸಂಸ್ಥೆಯು ಮಾಡಿದ್ದು ಇದಕ್ಕಾಗಿ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್‌ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇದರ ಮಧ್ಯೆ ಇರುವ 17 ಕಿಮೀ ಉದ್ದದ ಪಡೀಲ್ ನಂತೂರು- ಸುರತ್ಕಲ್ ಎನ್‌ಐಟಿಕೆ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ಸಂಗ್ರಹಿಸಲು ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಇದರಂತೆ, ಹೆಜಮಾಡಿಯಲ್ಲಿ ಈಗಾಗಲೇ ಕಾರು ಇನ್ನಿತರ ಸಾಮಾನ್ಯ ವಾಹನಗಳಿಗೆ 45 ರೂ. ಇದ್ದು, ಹೆಚ್ಚುವರಿಯಾಗಿ 45 ರೂ ಸೇರ್ಪಡೆಯಾಗುವ ಸಾಧ್ಯತೆಯಿದೆ, ಕಾರು ಪ್ರಯಾಣಿಕರು ಅಂದಾಜು 80ರಿಂದ 90ರೂ ಕೊಟ್ಟು ಹೆಜಮಾಡಿ ಟೋಲ್‌ಗೇಟ್‌ ದಾಟಬೇಕಾಗುತ್ತದೆ.

ಇದಲ್ಲದೆ, ಈಗಾಗಲೇ ಸುರತ್ಕಲ್ ಟೋಲ್ ಗೇಟ್ ನಲ್ಲಿದ್ದ ಮಂಗಳೂರು ನೋಂದಣಿಯ ಕೆಎ -19 ಸಂಖ್ಯೆಯ ವಾಹನಗಳ ರಿಯಾಯಿತಿಯನ್ನು ಕಡಿತ ಮಾಡಲಾಗಿದೆ. ಹೆಜಮಾಡಿ ಟೋಲ್ ನಲ್ಲಿ ಎಲ್ಲ ಮಾದರಿಯ ವಾಹನಗಳು ಕೂಡ ಸುರತ್ಕಲ್ ನಲ್ಲಿ ನೀಡುತ್ತಿದ್ದ ಶುಲ್ಕವನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ಆದೇಶದಲ್ಲಿ ಸ್ಪಷ್ಟವಾಗಿ ಸುರತ್ಕಲ್ ಟೋಟ್ ಗೇಟ್ ಸ್ಥಗಿತ ಅಥವಾ ತೆರವುಗೊಳ್ಳುವ ಬಗ್ಗೆ ಉಲ್ಲೇಖ ಮಾಡಿಲ್ಲ ಹೆಚ್ಚುವರಿಯಾಗಿ 17 ಕಿಮೀ ಉದ್ದದ ಸುರತ್ಕಲ್ – ನಂತೂರು ರಸ್ತೆಯ ನಿರ್ವಹಣೆಯ ಶುಲ್ಕವನ್ನು ನವಯುಗ ಕಂಪನಿಯವರು ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆ ಮೂಲಕ ಸುರತ್ಕಲ್, ಟೋಲ್ ಗೇಟ್ ರದ್ದುಗೊಂಡರು ಹೆಜಮಾಡಿ- ಮುಲ್ಕಿ ಭಾಗದ ಪ್ರಯಾಣಿಕರು ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುವ ಎಲ್ಲ ಮಾದರಿಯ ವಾಹನ ಸವಾರರು ಡಬಲ್ ಶುಲ್ಕ ತೆರಬೇಕಾಗುತ್ತದೆ.

- Advertisement -

Related news

error: Content is protected !!