Saturday, May 4, 2024
spot_imgspot_img
spot_imgspot_img

ಸುಳ್ಯ: ತನ್ನ ರಾಜಕೀಯ ಲಾಭಕ್ಕಾಗಿ ಸ್ವಂತ ಅಳಿಯನ್ನೇ ಬಲಿಪಶು ಮಾಡಿದ ದಿವ್ಯಪ್ರಭಾ ಚಿಲ್ತಡ್ಕ..! – ರಾಜ್ಯ ಕಾಂಗ್ರೆಸ್‌ ನಾಯಕರ ಮುಂದೆ ನಕಲಿ ಬಲಪ್ರದರ್ಶನ ಮಾಡಲು ಮುಂದಾದ ಮಹಿಳೆಯ ಮೇಲೆ ಎಫ್‌ಐಆರ್‌ ದಾಖಲು..!

- Advertisement -G L Acharya panikkar
- Advertisement -
vtv vitla

ಸುಳ್ಯ: ಆ ಒಂದು ಘಟನೆ ಸುಳ್ಯವನ್ನೇ ಬೆಚ್ಚಿಬೀಳಿಸಿತ್ತು. ಹಾಡಹಗಲೇ ಉದ್ಯಮಿ ನವೀನ್ ಮಲ್ಲಾರ ಅವರನ್ನು ಅಪಹರಣ ಮಾಡಲಾಗಿತ್ತು. ಹೆಣ್ಣು ಕೊಟ್ಟ ಅತ್ತೆಯೇ ಅಳಿಯ ಪಾಲಿಗೆ ವಿಲನ್‌ ಆಗಿ ಈಗ ಏನು ಆಗಿಲ್ಲ ಎಂಬಂತೆ, ಅಪರಾಧಗಳ ಬಲೆಯಿಂದ ತಪ್ಪಿಸಿಕೊಳ್ಳೇಕೆ ರಾಜ್ಯ ರಾಜಕೀಯದಲ್ಲಿ ಪುಕ್ಸಟ್ಟೆ ಶಕ್ತಿ ಪ್ರದರ್ಶನ ಮಾಡಿ ನಾಚಿಕೆಟ್ಟಿದ್ದು, ಈಗ ಆ ಖತರ್ನಾಕ್ ಮಹಿಳೆಯ ವಿರುದ್ಧ ಕಿಡ್ನಾಪ್‌ ಕೇಸ್‌ ದಾಖಲಾಗಿದೆ.

ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿ ದಿವ್ಯಪ್ರಭಾ ಚಿಲ್ತಡ್ಕ, ಅಳಿಯನ ಪಾಲಿಗೆ ಖಳನಾಯಕಿ. ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ಅದರಂತೆ ದಿವ್ಯಪ್ರಭಾ ಚಿಲ್ತಡ್ಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆದ್ರೆ ಈಗ ತಾನು ಮಾಡಿದ ದುಷ್ಕೃತ್ಯಗಳೇ ಮುಳುವಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಬೆಳ್ಳಾರೆ ಲಾಡ್ಜ್‌ನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ವಿವಾಹಿತ ಮಹಿಳೆ ಸಿಕ್ಕಿ ಬಿದ್ದಿದ್ದಳು. ಅದು ಮತ್ತಾರೂ ಅಲ್ಲ ದಿವ್ಯಪ್ರಭಾ ಚಿಲ್ತಡ್ಕ ಅವರ ಮಗಳು. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತಿನಂತೆ ದಿವ್ಯಪ್ರಭಾ ಚಿಲ್ತಡ್ಕ ನಡವಳಿಕೆ ಅಷ್ಟಕಷ್ಟೇ.

ಕಾಂಗ್ರೆಸ್ ನಾಯಕಿ ಅಳಿಯನ ಪಾಲಿಗೆ ಖಳನಾಯಕಿ
ಸ್ವಂತ ಅಳಿಯ ತನ್ನ ರಾಜಕೀಯ ಜೀವನಕ್ಕೆ ಮುಳುವಾಗುತ್ತಾನೋ ಎಂಬ ಕಾರಣಕ್ಕೆ ಕಿಡ್ನಾಪ್ ಮಾಡಿಸಿದ್ದಾರೆ. ಈ ಘಟನೆ ಡಿ.18ರಂದು ನಡೆದಿತ್ತು. ನವೀನ್ ಮಲ್ಲಾರ ಎಂಬವರನ್ನು ಕಿಡ್ನಾಪ್ ಮಾಡಲಾಗಿತ್ತು. ಈ ಘಟನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ದಿವ್ಯಪ್ರಭಾ ಚಿಲ್ತಡ್ಕ ತನ್ನ ಸಾಹೇಬರ ಪವರ್‍ ಬಳಿಸಿಕೊಂಡು ಈ ಪ್ರಕರಣ ಪೊಲೀಸ್ ಮೆಟ್ಟಿಲು ಹತ್ತದಂತೆ ನೋಡಿಕೊಂಡಿದ್ದರು. ಆದ್ರೆ ಇದೀಗ ಸುಳ್ಯದ ದಿವ್ಯಪ್ರಭಾ ಸಹಿತ ಆರು ಜನರ ವಿರುದ್ದ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ದಿವ್ಯಪ್ರಭಾ ಅವರ ಸ್ವಂತ ಅಳಿಯ ಬೆಳ್ಳಾರೆ ನಿವಾಸಿ ನವೀನ್. ಎಂ ಗೌಡ (32) ನೀಡಿದ ದೂರಿನ ಆಧಾರದ ಮೇಲೆ ದಿವ್ಯಪ್ರಭಾ, ಮಗಳು ಸ್ಪಂದನಾ, ಪತಿ ಪರಶುರಾಮ್, ನವೀನ್‌ ತಂದೆ ಮಾಧವ ಗೌಡ, ಸ್ಪರ್ಶಿತ್‌ , ಎಸ್‌ಐ ಆನಂದ್‌ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ದಿವ್ಯಪ್ರಭಾ ಮಗಳು ಸ್ಪಂದನಾರನ್ನ ನವೀನ್‌ ಗೌಡ ಮದುವೆಯಾಗಿ ಅಕ್ರಮ ಸಂಬಂಧವಿದೆ ಅಂತಾ ತಿಳಿದು ಪತಿ ಸ್ಪಂದನಾ ಅವರಿಂದ ನವೀನ್‌ ದೂರವಾಗಿದ್ದರು. ಡಿ.18ರಂದು ದಿವ್ಯಾಪ್ರಭಾ ನವೀನ್‌ ನನ್ನು ಕಿಡ್ನ್ಯಾಪ್‌ ಮಾಡಿಸಿ, ಜೆ.ಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್‌.ಎಂ ಗೌಡರವರು ಜ.04ರಂದು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ದಿವ್ಯಪ್ರಭಾ ಚಿಲ್ತಡ್ಕ ಹಾಗೂ ಸಂಗಡಿಗರು ಏನೂ ಆಗಿಲ್ಲ ಎಂಬಂತೆ ಫೋಸ್‌ ಕೊಟ್ಟುಕೊಂಡು ತಿರುಗಾಡುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕರ ಮುಂದೆ ಪುಕ್ಸಟ್ಟೆ ಶಕ್ತಿ ಪ್ರದರ್ಶನ
ಇನ್ನು ಕೆಲ ದಿನಗಳ ಹಿಂದಷ್ಟೇ ದಿವ್ಯಪ್ರಭಾ ಚಿಲ್ತಡ್ಕ ರಾಜ್ಯ ಕಾಂಗ್ರೆಸ್‌ ನಾಯಕರ ಮುಂದೆ ತನ್ನ ಪುಕ್ಸಟ್ಟೆ ಶಕ್ತಿ ಪ್ರದರ್ಶನ ಮಾಡಿದ್ದರು. ಕರಾವಳಿಯಲ್ಲಿ ನಾನು ಕೂಡ ಪ್ರಬಲ ರಾಜಕಾರಣಿ ಅನ್ನೋದನ್ನ ಸಾರೋಕೆ ಮುಂದಾಗಿದ್ದರು. ನಾಯಕರ, ಪೊಲೀಸರ ಪ್ರಭಾವ ಬಳಸಿ ಈ ಘಟನೆಯ ಸುತ್ತ ಪೊಲೀಸ್‌ ಇಲಾಖೆ ತನಿಖೆ ನಡೆಸದಂತೆ ಒತ್ತಡ ಹೇರಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ವಕೀಲೆ ಹೆಸರಿನಲ್ಲಿ ಕರೆ..!
ಇನ್ನು ಈ ವರದಿ ಪ್ರಕಟವಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿ ಒಬ್ಬರಿಗೆ ವಕೀಲೆಯ ಹೆಸರಿನಲ್ಲಿ ಕರೆಮಾಡಿ ಧಮ್ಕಿ ಹಾಕಿದ್ದಾರೆ. ಇದಕ್ಕೆ ಅಂಜದ ಪ್ರತಿನಿಧಿ ಸರಿಯಾಗಿ ಮಂಗಳರಾತಿ ಮಾಡಿದ್ದಾರೆ. ವಕೀಲೆಯ ಹೆಸರಿನಲ್ಲಿ ಕರೆಮಾಡಿ ತನ್ನ ಮುಖಕ್ಕೆ ತಾನೇ ಉಗಿಸಿಕೊಂಡ ಸನ್ನಿವೇಶವೂ ನಡೆಯಿತು.

- Advertisement -

Related news

error: Content is protected !!