Saturday, June 20, 2026
spot_imgspot_img
spot_imgspot_img

ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆ..!

- Advertisement -
- Advertisement -
vtv vitla
vtv vitla

ಸುಳ್ಯ: ಸುಳ್ಯ ತಾಲೂಕು ಬೆಳ್ಳಾರೆ ಮುಖ್ಯ ಪೇಟೆಯ ಎ.ಪಿ.ಎಂ.ಸಿ ಕಟ್ಟಡದಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.

ಮೃತವ್ಯಕ್ತಿ ತಮಿಳುನಾಡಿನ ಸೇಲಂ ಮೂಲದ ವ್ಯಕ್ತಿ ಗಣೇಶ ಎಂ. (38) ಎನ್ನಲಾಗಿದೆ. ಅವರು ನಿಂತಿಕಲ್ಲು ಆಸುಪಾಸಿನಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಬೆಳ್ಳಾರೆ ಪೇಟೆಯಲ್ಲಿ ಕೂಲಿ ಕೆಲಸಕ್ಕೆ ಹೋಗುವವರು ಇಲ್ಲಿನ ಎ.ಪಿ.ಎಂ.ಸಿ. ಸಂತೆ ಮಾರುಕಟ್ಟೆಯಲ್ಲಿ ಶವ ಬಿದ್ದಿರುವುದನ್ನು ಕಂಡು ಬೆಳ್ಳಾರೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೆಲ ಸಮಯದಿಂದ ಬೆಳ್ಳಾರೆ ಪೇಟೆಯಲ್ಲಿ ವಿಪರೀತ ಮದ್ಯಪಾನ ಮಾಡಿ ಯಾವುದೇ ಆಹಾರ ಸೇವಿಸದೆ ತಿರುಗುತ್ತಿದ್ದ ಎನ್ನಲಾಗಿದೆ.

- Advertisement -

Related news

error: Content is protected !!